ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ತೆರಳುವ ಪುರುಷರ ಮತ್ತು ಮಹಿಳೆಯರ ತಂಡಗಳಿಗೆ ಜೆರ್ಸಿ ವಿತರಣೆ ಮತ್ತು ಶುಭ ಹಾರೈಕೆ…
ಕ್ರೀಡೆಯ ಮೂಲಕ ನಾಡಿಗೆ ಕೀರ್ತಿ ತರಲು ಕ್ರೀಡಾ ಪಟುಗಳು ಶ್ರಮಿಸಬೇಕು - ಜಯಪ್ರಕಾಶ್ ರೈ...
ಸುಳ್ಯ: ದ. ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ತೆರಳುವ ಸುಳ್ಯ ತಾಲೂಕಿನ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ತಂಡಕ್ಕೆ ಆರಂಬೂರು ಗಣೇಶ್ ಇಂಡಸ್ಟ್ರೀಸ್ ಮಾಲಕ ಜಗದೀಶ್ ಸರಳಿಕುಂಜ ಮತ್ತು ದುರ್ಗಾ ದೇವಿ ಸ್ಟ್ರೈಕರ್ಸ್ ಅಧ್ಯಕ್ಷ ರಕ್ಷಿತ್ ಪ್ರಾಯೋಜಿಸಿದ ಜೆರ್ಸಿ ಟಿ ಶರ್ಟ್ ನ್ನು ವಿತರಿಸಿ ತಂಡಕ್ಕೆ ಶುಭ ಹಾರೈಸಲಾಯಿತು.
ವಿತರಿಸಿದ ನಂತರ ಮಾತನಾಡಿದ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಂಯೋಜಕ ಎನ್. ಜಯಪ್ರಕಾಶ್ ರೈ ಮಾತನಾಡಿ ಶಿಸ್ತು ಮತ್ತು ಕ್ರೀಡಾ ಸ್ಫೂರ್ತಿ ಮತ್ತು ಕ್ರೀಡಾಳುಗಳ ನಡವಳಿಕೆ ನಾಡಿಗೆ ಕೀರ್ತಿ ತರುತ್ತದೆ ಎಂದರು.
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು ವಹಿಸಿದ್ದರು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಶುಭ ಹಾರೈಸಿದರು
ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಕೆ. ಗೋಕುಲ್ ದಾಸ್, ಕೆ. ಬಿ. ಇಬ್ರಾಹಿಂ,ನಿತಿನ್ ಗೂನಡ್ಕ ಅಬ್ದುಲ್ ರಝಕ್ ರಜ್ಜು, ಚೇತನ್ ಕಜೆಗದ್ದೆ ರಾಜು ಪಂಡಿತ್,ಭವಾನಿ ಶಂಕರ್ ಕಲ್ಮಡ್ಕ, ಪ್ರಭಾಕರ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು.





