ಅಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣೆ…

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡನಡುಗೋಡು ಬಿ ಒಕ್ಕೂಟ, ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ )ಕರೆಂಕಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಮಹಿಳಾ ಸಮಿತಿ ಕರೆಂಕಿ ಇದರ ಜಂಟಿ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿj ದೇವಸ್ಥಾನ ಕರೆಂಕಿ ಇದರ ಸಭಾಭವನದಲ್ಲಿ ಅಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಮೇಲ್ವಿಚಾರಕರಾದ ಕೇಶವ ಕೆ, ಬಿಸಿರೋಡ್ ವಲಯದ ಅಧ್ಯಕ್ಷರಾದ ಶೇಖರ ಸಾಮಾನಿ, ಒಕ್ಕೂಟದ ಅಧ್ಯಕ್ಷರಾದ ಸುಂದರ ಪೂಜಾರಿ, ಪದಾಧಿಕಾರಿ ಪ್ರೇಮ ಹಾಗೂ ದುರ್ಗಾ ಫ್ರೆಂಡ್ಸ್ ನ ಅಧ್ಯಕ್ಷರಾದ ಭಾಸ್ಕರ ಕುಲಾಲ್ ಹಾಗೂ ಸರ್ವ ಸದಸ್ಯರು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹರ್ಷಿತಾ, ಪ್ರಗತಿಪರ ಕೃಷಿಕ ಜಿನ್ನಪ್ಪ ಉಪಸ್ಥಿತರಿದ್ದರು.