ಅರಂತೋಡು -ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ…

ಸುಳ್ಯ: ಅರಂತೋಡು ಉದಯನಗರ ತಿರುವಿನಲ್ಲಿ ಬಜ್ಪೆಯಿಂದ ಪ್ರವಾಸ ಹೊರಟಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.
ಮುಂಜಾನೆ 4 ಗಂಟೆಗೆ ಅವಘಡ ಸಂಭವಿಸಿದ್ದು, ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಷಯ ತಿಳಿದ ತಕ್ಷಣ ಅರಂತೋಡಿನ ತಾಜುದ್ದೀನ್ ಅರಂತೋಡು ಧಾವಿಸಿ ಅವರನ್ನು ಉಪಚರಿಸಿ ಕಳುಹಿಸಿದರು. ತಿರುವಿನಲ್ಲಿ ವಿದ್ಯುತ್ ಕಂಬವಿದ್ದರೂ ಅಲ್ಲಿಗೆ ಅತ್ಯವಶ್ಯಕವಾಗಿ ದಾರಿದೀಪ ಅಳವಡಿಸಬೇಕೆಂದು ತಾಜುದ್ದೀನ್ ಅರಂತೋಡು ಅಗ್ರಹಿಸಿದ್ದಾರೆ.

Related Articles

Back to top button