ಕುಳಾಯಿ ಹೆದ್ದಾರಿ ಜಂಕ್ಷನ್: ಕಾಂಕ್ರೀಟ್ ಕಾಮಗಾರಿ ಆರಂಭ….
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಕುಳಾಯಿ ಬಳಿ ಜಂಕ್ಷನ್ಗೆ ಕಾಂಕ್ರೀಟ್ ಮಾಡುವ ಕಾಮಗಾರಿ ಆರಂಭವಾಗಿದೆ. ಹೆದ್ದಾರಿ ಇಲಾಖೆಯ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವ ನೂತನ ಕಂಪೆನಿ ಕಾಮಗಾರಿಯನ್ನು ಆರಂಭಿಸಿದೆ.
ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಹೆದ್ದಾರಿಯ ಪ್ರಮುಖ ಜಂಕ್ಷನ್ಗಳಾದ ಕುಳಾಯಿ, ಬೈಕಂಪಾಡಿ ಕೈಗಾರಿಕಾ ಪ್ರದೇಶದ ತಿರುವು ರಸ್ತೆ, ಪಣಂಬೂರು ಬೀಚ್ ತಿರುವು ಜಂಕ್ಷನ್, ಕೂಳೂರು ಬ್ರಿಡ್ಜ್ ಅಯ್ಯಪ್ಪ ಗುಡಿ ಬಳಿ ಕಾಂಕ್ರೀಟ್ ಕಾಮಗಾರಿ ನಡೆಸಲು ಒತ್ತಾಯಿಸಿದ್ದರು. ಇದೀಗ ಇಲಾಖೆ ಕಾಮಗಾರಿ ಆರಂಭಿಸಿದೆ.