ಸುಳ್ಯ ಹವ್ಯಕ ವಲಯದ ವತಿಯಿಂದ ಅನ್ನದಾಸೋಹಕ್ಕೆ ಸಹಾಯಧನ…

ಸುಳ್ಯ: ಹವ್ಯಕ ವಲಯ ಸುಳ್ಯ ಸಮಿತಿಯ ವತಿಯಿಂದ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯುತ್ತಿರುವ ಅನ್ನದಾಸೋಹಕ್ಕೆ ಏ.7 ರಂದು ಸಹಾಯಧನ ನೀಡಲಾಯಿತು.
ಸುಳ್ಯದ ಅನಿವಾಸಿ ಕಟ್ಟಡ ಕಾರ್ಮಿಕರು ಹಾಗೂ ಅಗತ್ಯ ಫಲಾನುಭವಿಗಳಿಗೆ ಹವ್ಯಕ ವಲಯ ಸಮಿತಿ ವತಿಯಿಂದ ಒಂದು ದಿನದ ಆಹಾರದ ವ್ಯವಸ್ಥೆಗೆ ಪ್ರಾಯೋಜಕತ್ವ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್,ತಾಲೂಕು ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ನಗರ ಪಂಚಾಯತ್ ಸದಸ್ಯ ಹಾಗೂ ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಈ ಸಂದರ್ಭದಲ್ಲಿ ಹಾಜರಿದ್ದರು.
ಎಂ ಬಿ ಫೌಂಡೇಶನ್ ಅಧ್ಯಕ್ಷ, ಅನ್ನ ದಾಸೋಹದ ವ್ಯವಸ್ಥಾಪಕ ಎಂ ಬಿ ಸದಾಶಿವ ಶುಭ ಹಾರೈಸಿ ದರು.
ಮಹಾಮಂಡಲದ ಮಷ್ಟಿಭಿಕ್ಷಾ ಪ್ರಧಾನ ಶ್ರೀಕೃಷ್ಣ ಭಟ್ ಮೀನಗದ್ದೆ, ವಲಯ ಅಧ್ಯಕ್ಷ ಈಶ್ವರಕುಮಾರ್ ಭಟ್( ಪಂಚವಲ್ಲೀ) , ಉಪಾಧ್ಯಕ್ಷ ವಿಜಯಕೃಷ್ಣ ಕಬ್ಬಿನಹಿತ್ತಿಲು, ಕೋಶಾಧಿಕಾರಿ ಈಶ್ವರ ಭಟ್ ಸರವು, ರಕ್ಷಣಾವಿಭಾಗದ ಹರೀಶ್ ಕುಮಾರ್ ಉಬರಡ್ಕ ಹಾಗೂ ರಮೇಶ್ ಶರ್ಮ ಕುಂಜತ್ತೋಡಿ, ಸಹಾಯ ವಿಭಾಗ ಪ್ರಮುಖ ಮತ್ತು IMA ಸುಳ್ಯದ ಅಧ್ಯಕ್ಷ ಡಾ. ಶ್ರೀಕೃಷ್ಣ ಭಟ್ , ಘಟಕ ಕಾರ್ಯದರ್ಶಿ ಮಹೇಶ್ ಭಟ್ ಉಬರಡ್ಕ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button