ರಿಕ್ಷಾ ಬ್ಯಾಡ್ಜ್ ರಹಿತರಿಗೂ ಸರಕಾರದಿಂದ ಪರಿಹಾರ ನೀಡಲು ರಿಯಾಝ್ ಕಟ್ಟೆಕ್ಕಾರ್ ಒತ್ತಾಯ…..
ಸುಳ್ಯ: ಮುಖ್ಯಮಂತ್ರಿ ಯಡಿಯೂರಪ್ಪರವರು ಘೋಷಣೆ ಮಾಡಿರುವ ಸಹಾಯಧನ ಪಡೆಯಲು ಬ್ಯಾಡ್ಜ್ ಕಡ್ಡಾಯ ಎಂಬ ಮಾನದಂಡವನ್ನ ಅರ್ಜಿಯಲ್ಲಿ ಸೂಚಿಸಲಾಗಿದೆ. ಆದರೆ ಬಹುತೇಕ ಆಟೋ ರಿಕ್ಷಾ ಚಾಲಕರಲ್ಲಿ ಬ್ಯಾಡ್ಜ್ ಇರುವುದಿಲ್ಲ ಮತ್ತು ರಿಕ್ಷಾ ಪರವಾನಗಿ ತಾಲೂಕು ವ್ಯಾಪ್ತಿಯದಾಗಿರುತ್ತದೆ. ದಿ.03-07 -2017ರ ಆದೇಶ ಸಂಖ್ಯೆ 5826-2011ಲ್ಲಿ ಸುಪ್ರೀಂ ಕೋರ್ಟ್ ಸಾರಿಗೆ ಇಲಾಖೆಗೆ ನೀಡಿದ ಆದೇಶದಲ್ಲಿ ಬ್ಯಾಡ್ಜ್ ಕಡ್ಡಾಯವಲ್ಲ ಎಂಬ ಬಗ್ಗೆ ಉಲ್ಲೇಖವಿದೆ. ಅದರಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಆಟೋ ಚಾಲಕರ ಪರವಾಗಿ ನಿಯಮಾವಳಿ ಸಡಿಲಿಕೆ ಮಾಡಬೇಕೆಂದು ಹಾಗೂ ಅನೇಕ ಕಾರ್ಮಿಕರು ಕೂಡ ಯಾವುದೇ ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘಗಳ ಸದಸ್ಯತನ ಹೊಂದಿರುವುದಿಲ್ಲ ಅಥವಾ ಸದಸ್ಯತನ ರಿನೀವಲ್ ಮಾಡಿರುವುದಿಲ್ಲ. ಅಂಥವರಿಗೂ ಕೂಡಾ ಸಹಾಯಧನ ಸಿಗುವಂತಾಗಬೇಕು ಎಂದು ನಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಆಗ್ರಹಿಸಿದ್ದಾರೆ.