ಪೇರಡ್ಕ ದರ್ಗಾ ಮಸೀದಿ – 2 ನೇ ದಿನದ ಉದ್ಘಾಟನೆ…
ಸುಳ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪoಗಾಯ ಅವರು ಪೇರಡ್ಕ ದರ್ಗಾ ಮಸೀದಿಗೆ ಭೇಟಿ ನೀಡಿ 2 ನೇ ದಿನದ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಸಾಮರಸ್ಯದ ಬಗ್ಗೆ ಮಾತನಾಡಿದ ಅವರು ಯಾವ ಊರಿನಲ್ಲಿ ಸೌಹಾರ್ದತೆ ಇದೆಯೋ ಅಲ್ಲಿ ಅಭಿವೃದ್ಧಿ ಆಗುತ್ತದೆ. ಪೇರಡ್ಕ ಗೂನಡ್ಕ ಆಸುಪಾಸಿನ ಗ್ರಾಮ ಅಭಿವೃದ್ಧಿ ಆಗಿದೆ, ಅದಕ್ಕೆ ಇಲ್ಲಿಯ ನಾಯಕರುಗಳು ಕಾರಣ ಎಂದರು. ಜಿ ಕೆ ಹಮೀದ್ ಗೂನಡ್ಕ 5 ಬಾರಿ ಪಂಚಾಯತ್ ಸದಸ್ಯರಾಗಿ ಎರಡು ಬಾರಿ ಅಧ್ಯಕ್ಷರಾಗಿ 2ಬಾರಿ ಗಾಂಧಿ ಪುರಸ್ಕಾರ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ. ತೆಕ್ಕಿಲ್ ಕುಟುಂಬಸ್ಥರು, ಅವರ ಹಿರಿಯರು, ಜಮಾತ್ ಸಮಿತಿ, ಊರಿನವರು ಮಾಡಿದ ಕೆಲಸ ಹಾಗೂ ಇಲ್ಲಿನ ಸೌಹಾರ್ದತೆ ಎಲ್ಲರಿಗೂ ಮಾದರಿ ಎಂದು ಅವರು ಶ್ಲಾಘಿಸಿದರು.
ಟಿ ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಹನೀಫ್ ನಿಜಾಮಿ ಮೊಗ್ರಲ್ ಮಾತನಾಡಿದರು. ವೇದಿಕೆಯಲ್ಲಿ ಪೇರಡ್ಕ ಖತೀಬ್ ರಿಯಾಜ್ ಫೈಝಿ, ಧರ್ಮತನ್ನಿ ಹಸೈನಾರ್, ಮೊಯಿದಿನ್ ಫ್ಯಾನ್ಸಿ ,ಜಮಾಲ್ ಬೆಳ್ಳಾರೆ, ಅಬ್ದುಲ್ ಖಾದರ್ ಬ್ಯಾಂಬಾಡಿ, ತಾಜ್ ಮಹಮ್ಮದ್, ಹಸೈನಾರ್. ಎ. ಕೆ., ಶಾಜಿದ್, ಸಿರಾಜ್ ಕಡೆಪಾಲ, ಯೂಸುಫ್ ಕಲ್ಲುಗುಂಡಿ, ಇಬ್ರಾಹಿಂ ಕರಾವಳಿ ಆಲಿ ಹಾಜಿ ಉಪಸ್ಥಿತರಿದ್ದರು ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ, ಅಬ್ದುಲ್ ಖಾದರ್ ಮೊಟ್ಟಂಗಾರ್ ವಂದಿಸಿದರು.