ಪಹಲ್ಗಾಮ್‍ ಹಿಂದೂ ನರಮೇಧ – ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಎಬಿವಿಪಿ ಘಟಕದ ಆಶ್ರಯದಲ್ಲಿ ಪ್ರತಿಭಟನಾ ಜಾಥಾ…

ಪುತ್ತೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಅಮಾಯಕ ಹಿಂದೂ ಪ್ರವಾಸಿಗರ ಮೇಲೆ ಧರ್ಮಾಂಧರು ನಡೆಸಿದ ಗುಂಡಿನ ದಾಳಿಯನ್ನು ಪ್ರತಿಭಟಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಎಬಿವಿಪಿ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಎ.26 ರಂದು ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ವಿಧ್ಯಾರ್ಥಿಗಳು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಅವರ ಮುಂದಾಳುತ್ವದಲ್ಲಿ ಕಾಲೇಜು ಆವರಣದಿಂದ ನೆಹರೂ ನಗರದ ವರೆಗೆ ಘಟನೆಯನ್ನು ಖಂಡಿಸುವ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನೆಹರೂ ನಗರದಲ್ಲಿ ವಿದ್ಯಾರ್ಥಿ ನಾಯಕರು ಘಟನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿ, ನಾವೆಲ್ಲರೂ ಒಗ್ಗಟ್ಟಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಬಹುದು, ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ ಸರ್ಕಾರವು ನಡೆಸುವ ಕಾರ್ಯಾಚರಣೆಗೆ ನಮ್ಮೆಲ್ಲರ ಸಹಕಾರವನ್ನು ನೀಡೋಣ. ಧರ್ಮಾಂಧತೆಗೆ ಅವಕಾಶವನ್ನು ನೀಡದೆ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ನಮ್ಮಿಂದಾದ ಸಹಕಾರವನ್ನು ನೀಡೋಣ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಘಟನೆಯಲ್ಲಿ ಅಸುನೀಗಿದ ಎಲ್ಲರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

protest jatha (2)

protest jatha (4)

protest jatha (5)

Sponsors

Related Articles

Back to top button