ಹಿಂದು ಸಂಘಟನೆಗಳಿಂದ ಕಾಶ್ಮೀರದ ಘಟನೆ ವಿರುದ್ಧ ಪ್ರತಿಭಟನೆ, ಖಂಡನೆ ಜಾಗೃತರಾಗುವಂತೆ ಎಚ್ಚರಿಕೆ ಕರೆ…

ಬಂಟ್ವಾಳ:ಕಾಶ್ಮೀರದಲ್ಲಿ ಉಗ್ರಗಾಮಿಗಳು ಪ್ರವಾಸಕ್ಕೆ ತೆರಳಿದ ಹಿಂದುಗಳನ್ನು ಭೀಕರ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಏ. 24 ರಂದು ಸಂಜೆ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಪ್ರತಿಭಟನೆಗೆ ಹಲವು ಹಿಂದುಪರ ಸಂಘಟಗಳು ಕೈಜೋಡಿಸಿದ್ದವು. ಕಾಶ್ಮೀರ ಘಟನೆಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ, ಹಣತೆಯನ್ನು ಬೆಳಗಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಇಡೀ ದೇಶವೇ ತಲೆತಗ್ಗಿಸುವ ಕೃತ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಇದನ್ನು ಖಂಡಿಸಬೇಕು. ಪ್ತಧಾನಿ ನರೇಂದ್ರ ಮೋದಿ ಕೈಗೊಳ್ಳುವ ಕ್ರಮವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ನಾವೆಲ್ಲ ಹಿಂದುಗಳು ಒಟ್ಟಾಗದಿದ್ದರೆ, ನಮಗೆ ಸಾವು ನಿಶ್ಚಿತ, ಭಯೋತ್ಪಾದಕ ಶಕ್ತಿಗಳಿಗೆ ಉತ್ತರ ಕೊಡುವ ಕೆಲಸವನ್ನು ಇಂದಿನಿಂದಲೇ ಪ್ರಾರಂಭಿಸೋಣ. ಎಂದರು.
ವಿಶ್ವ ಹಿಂದು ಪರಿಷತ್ ಬಂಟ್ವಾಳ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಮಾತನಾಡಿ, ಹಿಂದುಗಳನ್ನು ಹುಡುಕಿ ಕೊಲ್ಲಲಾಗುತ್ತಿದೆ.ಹಿಂದುವಾಗಿ ಹುಟ್ಟಿದ್ದು ಅವನು ಮಾಡಿದ ತಪ್ಪೇ! ಎಂದು ಪ್ರಶ್ನಿಸಿದ ಅವರು ಮುಂದಿನ ಜನಾಂಗ ಬದುಕಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣಬಾಗಿದೆ. ದೇಶದ ಮಣ್ಣನ್ನು ಒಪ್ಪಿಕೊಳ್ಳದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಕೊನೆಗಾಣಬೇಕು ಆಕ್ರೋಶ ವ್ಯಕ್ತ ಪಡಿಸಿದರು.
ಮುಖಂಡರಾದ ರಾಮದಾಸ ಬಂಟ್ವಾಳ ಮಾತನಾಡಿ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುವ ಕುರಿತು ಪ್ರಧಾನಿ ಮೋದಿ ಹೇಳಿದ್ದನ್ನು ನೆನಪಿಸಿ, ಭಯವನ್ನು ಬಿತ್ತುವವರಿಗೆ ತಕ್ಕ ಶಾಸ್ತಿ ಮಾಡುವ ಕೆಲಸವಾಗಲಿದೆ ಎಂದರು.
ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ಮಾತನಾಡಿ, ಹಿಂದುಗಳಲ್ಲಿ ಜಾಗೃತಿಯಾಗಬೇಕಾಗಿದೆ ಎಂದರು. ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಹಿಂದುಗಳು ಇನ್ನಾದರೂ ಎಚ್ಚರಗೊಳ್ಳಬೇಕಾಗಿದೆ ಎಂದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಈ ಸಂದರ್ಭ ಹಿಂದು ಸಂಘಟನೆ ಹಾಗೂ ಬಿಜೆಪಿ ಪ್ರಮುಖರಾದ ಜಿ.ಕೆ. ಭಟ್, ಅಜಯ್ ಕಾಂಪ್ರಬೈಲ್, ನರಸಿಂಹ ಮಾಣಿ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಸುಲೋಚನಾ ಜಿ.ಕೆ. ಭಟ್, ತಿರುಲೇಶ್ ಬೆಳ್ಳೂರು, ಸುಜಿತ್ ಕೊಟ್ಟಾರಿ, ಪ್ತಭಾಕರ ಪ್ರಭು, ದಿನೇಶ್ ಅಮ್ಟೂರು, ಶಿವಪ್ರಸಾದ್ ಶೆಟ್ಟಿ, ಯಶೋಧರ ಕರ್ಬೆಟ್ಟು, ಡೊಂಬಯ ಅರಳ, ,ಭರತ್ ಕುಮ್ಡೇಲು, ರೇಷ್ಮಾ ಶಂಕರಿ ಬಲಿಪಗುಳಿ, ರತ್ನಾಕರ ಶೆಟ್ಟಿ, ಲಖಿತಾ ಶೆಟ್ಟಿ, ಕ.ಕೃಷ್ಣಪ್ಪ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಸಮಿತ್ ರಾಜ್ ದರೆಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.