ವಿದುಷಿ ಅಯನಾ. ವಿ. ರಮಣ್ – ಪರ್ಯಾಯ ಶ್ರೀಗಳಿಂದ ಆಶೀರ್ವಾದ…

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದ ಮಧ್ವ ಮಂಟಪದಲ್ಲಿ, ಸಂಗೀತ, ನೃತ್ಯ, ಸಂಸ್ಕೃತಿ,ಶಿಕ್ಷಣಗಳ ವಿಶಿಷ್ಟ ಸಮ್ಮಿಲನದ ” ನಾಟ್ಯಾಯನ ” ಕಾರ್ಯಕ್ರಮ ನೀಡಿದ ದೂರದರ್ಶನ ಕಲಾವಿದೆ ವಿದುಷಿ ಅಯನಾ. ವಿ. ರಮಣ್ ಮೂಡುಬಿದಿರೆ ಮತ್ತು ಬಳಗದವರನ್ನು ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆಯಿತ್ತು ಹರಸಿದರು .
ಕಿರಿಯ ಯತಿ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ದಾನಿಗಳಾದ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ದಂಪತಿ ಹಾಜರಿದ್ದರು.