ಶಿಕ್ಷಕ ಶಿವರಾಮ ರಾವ್ ಅವರಿಗೆ ವಿದಾಯ ಸಮಾರಂಭ…

ಬಂಟ್ವಾಳ:ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಆಲಾಡಿ ಸಜೀಪ ಮುನ್ನೂರು ಇಲ್ಲಿ 9 ವರ್ಷಗಳ ಕಾಲ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತರಾದ ಶಿವರಾಮ ರಾವ್ ಅವರನ್ನು ವಿದಾಯ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ವಹಿಸಿದ್ದರು. ಶಿಕ್ಷಕರ ನಿವೃತ್ತ ಜೀವನ ಸುಖ ಹಾಗೂ ನೆಮ್ಮದಿಯಿಂದ ಕೂಡಿ ನೂರು ಕಾಲ ಬಾಳುವಂತಾಗಲಿ ಎಂದು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ರೋಹಿಣಿ ,ಸಹ ಅಧ್ಯಾಪಕಿ ಯು ಪದ್ಮಾವತಿ ಸೇವೆಯನ್ನು ಸ್ಮರಿಸಿದರು. ಶಿಕ್ಷಕಿ ಸುರೇಖಾ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕಿ ಮಮತಾ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ವಿದ್ಯಾ ಧನ್ಯವಾದ ನೀಡಿದರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.