ಲಯನ್ಸ್ ಕ್ಲಬ್ ಮಾಣಿ ಅಧ್ಯಕ್ಷರಾಗಿ ಜನಾರ್ದನ ಪೆರಾಜೆ ಆಯ್ಕೆ…
ಜುಲೈ 22 ರಂದು ಪದಗ್ರಹಣ ಸಮಾರಂಭ...

ಬಂಟ್ವಾಳ:ಲಯನ್ಸ್ ಕ್ಲಬ್ ಮಾಣಿ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಜನಾರ್ದನ ಕೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರತ್ನಾಕರ ರೈ ಮಾಣಿ, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ ,ಉಪಾಧ್ಯಕ್ಷರಾಗಿ ವಿನ್ಸೆಂಟ್ ಲಸ್ರಾದೋ, ಜೊತೆ ಕಾರ್ಯದರ್ಶಿಯಾಗಿ ಮಾರ್ಸೆಲ್ ಪಾಯಸ್ , ರೊನಾಲ್ಡ್ ಮೊನಿಸ್ ಆಯ್ಕೆ ಮಾಡಲಾಗಿದೆ ಎಂದು ಸ್ಥಾಪಕ ಅಧ್ಯಕ್ಷ ಗಂಗಾಧರ ರೈ ಮಾಣಿ ಪ್ರಕಟಿಸಿದ್ದಾರೆ.
ಸೇವಾಧ್ಯಕ್ಷರಾಗಿ ಡಾ. ಮನೋಹರ ರೈ , ವಿವಿಧ ಪದಾಧಿಕಾರಿಗಳಾಗಿ ಕೂಸಪ್ಪ ಪೂಜಾರಿ, ಉಮೇಶ್ ಪಿ, ರವಿಕಿಶನ್ ಶೆಟ್ಟಿ, ಗಣೇಶ್ ಪೂಜಾರಿ, ಕೆ.ಎನ್ ಗಂಗಾಧರ ಆಳ್ವ , ಡಾ. ಶ್ರೀನಾಥ್ ಆಳ್ವ ,ವಿನ್ಸೆಂಟ್ ಪಾಯಸ್ ಡಾ. ಜಗದೀಶ್ ಭಟ್ ಆಯ್ಕೆಯಾಗಿದ್ದಾರೆ ಮತ್ತು ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರನ್ನು ನೇಮಿಸಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷರಾಗಿ ರಾಮಕಿಶನ್ ರೈ ಅನಂತಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಗ್ರಹಣ ಸಮಾರಂಭವು ಜು.22 ರಂದು ಸಂಜೆ ಪದ್ಮ ಮಿನಿ ಹಾಲ್ ಮಾಣಿಯಲ್ಲಿ ಜರಗಲಿದೆ. ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಪಿ.ವಿ.ಅನಿಲ್ ಕುಮಾರ್ ಪದಗ್ರಹಣ ನೆರವೇರಿಸಲಿದ್ದಾರೆ ಎಂದು ಅಧ್ಯಕ್ಷ ಜನಾರ್ದನ ಪೆರಾಜೆ ತಿಳಿಸಿದ್ದಾರೆ.