ಹಳೆಯ ಪುಸ್ತಕ ಸಂಗ್ರಹ ಅಭಿಯಾನ…

ರಾಣಿಬೇನ್ನೂರು: ನಗರದ ಯುವ ಕವಿ, ಸಾಹಿತ್ಯ ಪರಿಚಾರಕ ಬಸವರಾಜ ಎಸ್. ಬಾಗೇವಾಡಿಮಠ ರವರು ತಮ್ಮ ಸಂಸ್ಥೆಯ ವತಿಯಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ಓದಲು ಕೊಡುವ ದೃಷ್ಟಿಯಿಂದ ವಿನೂತನ ಯೋಜನೆಯೊಂದನ್ನು ಜಾರಿಗೊಳಿದ್ದಾರೆ. ಮನೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಭವಿಸಿದ ಯಾವುದೇ ಹಳೆಯ ಪಠ್ಯ ಪುಸ್ತಕ, ಕಾದಂಬರಿ-ಕಥೆ- ಕವನ ಸಂಕಲನ ಲೇಖಕನಗಳ ಮಾಲಿಕೆ, ವಾರ-ಮಾಸ ಪತ್ರಿಕೆ, ಗ್ರಂಥಗಳು, ನಿಘಂಟುಗಳು ಸೇರಿದಂತೆ ಇತರೆ ಯಾವುದೇ ವಿಷಯ ಜ್ಞಾನಾರ್ಜನೆ ಹೆಚ್ಚಿಸುವ ಪುಸ್ತಕಗಳಿರಲಿ ಅವುಗಳನ್ನು ರದ್ದಿಗೆ ಹಾಕದೇ ಮುಕ್ತವಾಗಿ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿರುವ ಪುಸ್ತಕ ಸಂಗ್ರಹ ಅಭಿಯಾನ ಜೋಳಿಗೆಗೆ ನೀಡಿ ಅವುಗಳ ಸದುಪಯೋಗಕ್ಕೆ ಸಹಕರಿಸಿಲು ಬಾಗೇವಾಡಿಮಠ ವಿಗಮ್ರ ಮನವಿ ಮಾಡಿದ್ದಾರೆ.
ಬಸವರಾಜ ಎಸ್. ಬಾಗೇವಾಡಿಮಠ. ವಿಳಾಸ: ರಂಗನಾಥ ನಗರ: ರಾಣಿಬೇನ್ನೂರು: 581115. ಹಾವೇರಿ ಜಿಲ್ಲಾ. ಮೊ ನಂ ಹಾಗೂ ವಾಟ್ಸಪ್ ನಂ: 9611381039 ಸಂಪರ್ಕಿಸಬಹುದಾಗಿದೆ.

Sponsors