ಬಂಟ್ವಾಳ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆ….

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ತನಿಖಾ ಸಬ್ ಇನ್ಸ್ಪೆಕ್ಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಉತ್ತರ ಕನ್ನಡದ ಕಾರವಾರ ನಿವಾಸಿ ಕೀರಪ್ಪ(54) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು ಕಾರಣ ತಿಳಿದು ಬಂದಿಲ್ಲ.
ಅವರು ಶಿರಸಿ ಠಾಣೆಯಿಂದ ಐದು ತಿಂಗಳ ಹಿಂದೆ ವರ್ಗಾವಣೆಗೊಂಡು ಬಂಟ್ವಾಳಕ್ಕೆ ಬಂದಿದ್ದರು.ಬಂಟ್ವಾಳ ಪೇಟೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗದೆ‌ ಇದ್ದು ಫೋನ್ ಕಾಲ್ ಮಾಡಿದಾಗಲೂ ರಿಸೀವ್ ಮಾಡದೇ ಇದ್ದುದರಿಂದ ಸಂಶಯಗೊಂಡು ಪೊಲೀಸರು ಸಂಜೆಯ ವೇಳೆಗೆ ವಾಸಿಸುತ್ತಿರುವ ಬಾಡಿಗೆ ಮನೆಗೆ ಹೋಗಿ ಕಿಟಿಕಿಯಲ್ಲಿ ನೋಡಿದಾಗ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು ಸ್ಥಳಕ್ಕೆ ಅಡಿಶನಲ್ ಎಸ್ಪಿ‌‌ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Sponsors

Related Articles

Back to top button