ಫೆಬ್ರವರಿ 06: ತ್ರಿನೇತ್ರಾ: ವಿದ್ಯಾರ್ಥಿಗಳ ರಾಷ್ಟ್ರೀಯ ಸಂವಾದ ಕಾರ್ಯಾಗಾರ…
ಬಂಟ್ವಾಳ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ , ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಆಶ್ರಯದಲ್ಲಿ ಫೆ. 06 ಗುರುವಾರ ಬೆಳಿಗ್ಗೆ ಗಂಟೆ 09.30ರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ “ತ್ರಿನೇತ್ರಾ: ನಾಳೆಗಳ ಭರವಸೆಯ ಕಣ್ಣುಗಳು” ಎಂಬ ಪರಿಕಲ್ಪನೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾನಸಿಕ ತುಮುಲಗಳಿಗೆ ಉತ್ತರ ಕಂಡುಕೊಳ್ಳಲಾಗದೆ ನಲುಗುತ್ತಿರುವ ಯುವ ಸಮುದಾಯಕ್ಕೆ, ಬುದ್ದಿಗೆ ಕೆಲಸ ಕೊಡದೆ ಆತುರದ ನಿರ್ಧಾರದಿಂದ ಸಮಸ್ಯೆಯ ಸುಳಿಯೊಳಗೆ ಸಿಲುಕುತ್ತಿರುವ ಯುವ ಸಮುದಾಯದ ಜೊತೆಗೆ ನೇರಾ ನೇರಾ ಮಾತುಕತೆಗೆ ವೇದಿಕೆಯನ್ನು ಸಿದ್ಧಗೊಳಿಸಲಾಗಿದೆ.
ಕಾನೂನು, ರಾಜಕೀಯ ಹಾಗೂ ಮನಃಶಾಸ್ತ್ರ ಎಂಬ ಮೂರು ವಿಚಾರಗಳಲ್ಲಿ ಪರಿಣತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಕಾನೂನು ಸಂವಾದದಲ್ಲಿ ನಿವೃತ್ತ ಲೋಕಾಯುಕ್ತರಾದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಹಾಗೂ ದ.ಕ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ, ಮನಃಶಾಸ್ತ್ರ ಸಂವಾದದಲ್ಲಿ ಖ್ಯಾತ ಮನೋರೋಗ ತಜ್ಞ ಡಾ. ರವೀಶ ತುಂಗಾ ಹಾಗೂ ಡಾ. ರಮೀಳಾ ಶೇಖರ್ ಭಾಗವಹಿಸುತ್ತಿದ್ದಾರೆ.
ದ.ಕಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಸಂವಾದ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಬಂಟ್ವಾಳ ತಾಲೂಕು ತಹಶೀಲ್ದಾರರು ರಶ್ಮಿ ಎಸ್.ಆರ್., ಲ/ಜಿಲ್ಲಾಗವರ್ನರ್ ಲ/ರೊನಾಲ್ಡ್‍ಗೋಮ್ಸ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್‍ಕುಮಾರ್ ಸಸಿಹಿತ್ಲು, ಲ/ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಡಾ.ಗೀತ್ ಪ್ರಕಾಶ್, ಲ/ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಲ/ವಸಂತ್‍ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಎಂದು ಬಂಟ್ವಾಳ ಲಯನ್ಸ್ ಕ್ಲಬ್‍ಅಧ್ಯಕ್ಷ ಲ/ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಹಾಗೂ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಇಂದಿರೇಶ್ ಬಿ. ತಿಳಿಸಿದ್ದಾರೆ.