ಹಾಸನ – ತಲೆ ಮೇಲೆ ಕಲ್ಲು ಹಾಕಿ ಕೊಂದು ಮಹಿಳೆ ಮೇಲೆ ಅತ್ಯಾಚಾರ…

ಹಾಸನ: ರಸ್ತೆ ಪಕ್ಕದಲ್ಲಿ ಮಲಗಿದ್ದ ನಿರ್ಗತಿಕ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿ ಆಕೆಯ ಶವದೊಂದಿಗೆ ವಿಕೃತ ಕಾಮಿಯೋರ್ವ ಲೈಂಗಿಕ ಕ್ರಿಯೆ ನಡೆಸಿರುವ ಪೈಶಾಚಿಕ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬಿಎಂ ರಸ್ತೆಯಲ್ಲಿನ ಎನ್‍ಆರ್ ವೃತ್ತದ ಸಮೀಪವಿರುವ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಎದುರು ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವ ತಲೆ ಮೇಲೆ ಕಲ್ಲು ಎತ್ತಿಹಾಕಿ ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ವಿಕೃತ ಕಾಮಿಯ ಪೈಶಾಚಿಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆ ಮೇಲೆ ಕಲ್ಲು ಎತ್ತಿಹಾಕಿರುವ ವಿಕೃತಕಾಮಿ ಬಳಿಕ ಆಕೆಯ ಶವದ ಮೇಲೆ ಎರಗಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಅಂಗಡಿ ಮುಂದೆ ಮಲಗಿದ್ದ 35-40 ವಯಸ್ಸಿನ ಮಹಿಳೆಯ ಮಹಿಳೆಯ ಮೇಲೆ ಕಾಮುಕ ವ್ಯಕ್ತಿ ಎರಗಲು ಪ್ರಯತ್ನಿಸಿದಾಗ ಆಕೆ ಅಂಗಲಾಚಿ ಬೇಡುತ್ತಾಳೆ. ಅದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೀಚಕ ಆಕೆಯನ್ನು ಎಳೆದಾಡುತ್ತಾನೆ. ಆಕೆಯ ವಿರೋಧ ಲೆಕ್ಕಿಸದೆ, ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಸಾಯಿಸಿ, ಅತ್ಯಾಚಾರ ಎಸಗಿದ್ದಾನೆ.

ಪೊಲೀಸರು ಸಿಸಿ ಟಿವಿ ವಿಡಿಯೋ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button