ಲಯನ್ಸ್ ಕ್ಲಬ್ ಮಾಣಿ ವತಿಯಿಂದ ರೋಲರ್ ಕೊಡುಗೆ…

ಬೊಳಂತಿಮೊಗರು: ದ.ಕ ಜಿ ಪಂ ಹಿ ಪ್ರಾ ಶಾಲೆ ಬೊಳಂತಿಮೊಗರು. (ಕನ್ನಡ) ಇಲ್ಲಿಗೆ ಶಾಲೆಯ ಕ್ರೀಡಾಂಗಣದ ಅತಿ ಅವಶ್ಯಕ ಬೇಡಿಕೆಯಾದ ರೋಲರ್ ನ್ನು ಮಾಣಿ ಕರ್ನಾಟಕ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಲ. ಶ್ರೀ ಗಂಗಾಧರ ರೈ ಯವರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಮಾಣಿ ಇದರ ವತಿಯಿಂದ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ H ಇವರು ಧನ್ಯವಾದ ಅರ್ಪಿಸಿದರು.