ಕೆ. ವಿ. ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಾ. ಕುರುಂಜಿ ವೆಂಕಟ್ರಮಣ ಗೌಡರ 10 ನೇ ಪುಣ್ಯ ಸ್ಮರಣೆ…
ಕೆವಿಜಿಯವರ ಜೀವನ ಸಂದೇಶ ಮೌಲ್ಯ ಇಂದಿಗೂ ಪ್ರಸ್ತುತ :ಚಂದ್ರಶೇಖರ ಪೇರಾಲು…

ಸುಳ್ಯ: ಆಧುನಿಕ ಸುಳ್ಯದ ಶಿಲ್ಪಿ, ಸುಳ್ಯವನ್ನು ಶಿಕ್ಷಣ ಕಾಶಿಯನ್ನಾಗಿಸಿದ ಡಾ. ಕುರುಂಜಿ ವೆಂಕರಮಣ ಗೌಡರ 10 ನೇ ಪುಣ್ಯಸ್ಮರಣೆಯನ್ನು ಪುಷ್ಪಾರ್ಚನೆ ಮತ್ತು ನುಡಿ ನಮನ ಮೂಲಕ ಸ್ಮರಣೆ ಮಾಡಲಾಯಿತು .
ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರದಾನ ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಜನಾರ್ಧನ ನಾಯ್ಕ್, ಪೂರ್ವಾಧ್ಯಕ್ಷರುಗಳಾದ ನಿತ್ಯಾನಂದ ಮುಂಡೋಡಿ, ದೊಡ್ಡಣ್ಣ ಬರಮೇಲು, ಉಪಾಧ್ಯಕ್ಷರುಗಳಾದ ಕೆ. ಎಂ. ಮುಸ್ತಫ, ಎನ್. ಎ. ಜ್ಞಾನೇಶ್, ಪದಾಧಿಕಾರಿಗಳಾದ ಆನಂದ ಖಂಡಿಗ, ಮಾಧವ ಮಡಪ್ಪಾಡಿ, ಪ್ರಭಾಕರ ನಾಯರ್ ಸಿ. ಎಚ್., ಅಬ್ದುಲ್ ರೆಹಮಾನ್ ಮೊಗರ್ಪಣೆ, ಎಸ್. ಆರ್ . ಸೂರಯ್ಯ, ರಾಜು ಪಂಡಿತ್ ಮೊದಲಾವರು ಉಪಸ್ಥಿತರಿದ್ದರು.
