‘ಭರತಾಂಜಲಿ’ಯಲ್ಲಿ ಗಮಕವಾಚನ – ಪ್ರವಚನ…

ರಾಮಾಯಣದಿಂದ ಜೀವನ ಪಾಠ: ಭಾಸ್ಕರ ರೈ ಕುಕ್ಕುವಳ್ಳಿ…

ಮಂಗಳೂರು: ‘ಭಾರತೀಯರ ಪ್ರಸ್ಥಾನ ತ್ರಯಗಳಲ್ಲೊಂದಾದ ಶ್ರೀ ಮದ್ರಾಮಾಯಣ ಮಹಾಕಾವ್ಯದಿಂದ ಮನುಷ್ಯ ಸಂಬಂಧದ ಬೇರೆ ಬೇರೆ ಮುಖಗಳನ್ನು ಪರಿಚಯಿಸಲಾಗಿದೆ. ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ವಿವಿಧ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕಟ್ಟಿಕೊಡುವ ಈ ಕಾವ್ಯದಲ್ಲಿ ಬೇಕಾದಷ್ಟು ಜೀವನ ಪಾಠವಿದೆ’ ಎಂದು ಯಕ್ಷಗಾನ ಅರ್ಥದಾರಿ ಮತ್ತು ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯು, ಗಮಕ ಕಲಾ ಪರಿಷತ್ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಭರತಾಂಜಲಿ’ ಮಿನಿ ಹಾಲ್ ಒನಲ್ಲಿ ಏರ್ಪಡಿಸಿದ್ದ ಗಮಕವಾಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಸ್ಕೃತಿಯ ಅರಿವು:
ಸ್ವಸ್ತಿಕ್ ನ್ಯಾಷನಲ್ ಶಾಲೆ ಉರ್ವಾಸ್ಟೋರ್ ಇದರ ಸಂಚಾಲಕ ರಾಘವೇಂದ್ರ ಹೊಳ್ಳ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ನಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗೆ ಭಾರತೀಯ ಸನಾತನ ಸಂಸ್ಕೃತಿಯ ಅರಿವು ಅಗತ್ಯ. ಇದನ್ನು ಮೂಡಿಸುವ ಸಲುವಾಗಿ ಅವರಿಗೆ ಪುರಾಣ ಪುಣ್ಯ ಕಥೆಗಳನ್ನು ಬೋಧಿಸಬೇಕಾಗಿದೆ’ ಎಂದವರು ನುಡಿದರು.
ಭರತನ ಭಕ್ತಿ:
ಕವಿ ಹೊಸೂರಿ ರಾಮಸ್ವಾಮಿ ಅಯ್ಯಂಗಾರ್ ವಿರಚಿತ ‘ಗಮಕ ಸುರಭಿ’ ಕೃತಿಯ ಭರತ ಭಕ್ತಿ ಕಾವ್ಯದಿಂದ ಆಯ್ದ ‘ಪಾದುಕಾ ಪ್ರದಾನ’ ಭಾಗವನ್ನು ಗಮಕಿ ಸುರೇಶ್ ರಾವ್ ಅತ್ತೂರು ವಾಚಿಸಿದರು. ವಿದ್ವಾನ್ ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನಿಸಿದರು.
ಭರತಾಂಜಲಿಯ ನಿರ್ದೇಶಕ ಶ್ರೀಧರ್ ಹೊಳ್ಳ ಸ್ವಾಗತಿಸಿ ಪ್ರಸ್ತಾವನೆಗೈದರು. ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು.

whatsapp image 2023 08 07 at 5.34.00 pm
whatsapp image 2023 08 07 at 5.34.00 pm (1)
Sponsors

Related Articles

Back to top button