ಗೂನಡ್ಕ ತೆಕ್ಕಿಲ್ ಶಾಲೆಯಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ…

ಸುಳ್ಯ: ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 8ರಂದು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಸುಳ್ಯ ತಾಲೂಕಿನ ಪೊಲೀಸ್ ಠಾಣೆಯ ಸಬ್ -ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸರಸ್ವತಿ ರವರು ಈ ಕಾನೂನಿನ ಮೂಲಕ, ಅಪ್ರಾಪ್ತ ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲತೆ ಮತ್ತು ಕಿರುಕುಳದಂತಹ ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾನೂನಿನ ಅಡಿಯಲ್ಲಿ ವಿವಿಧ ಅಪರಾಧಗಳಿಗೆ ವಿಭಿನ್ನ ಶಿಕ್ಷೆಗಳನ್ನು ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಅನ್ನು ನೀಡಿ ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಕಚೇರಿ ನಿರ್ವಾಹಕರಾಗಿರುವ ಅನು ಕುಮಾರ್ ರವರು ಮತ್ತು ಶಾಲೆಯ ಆಡಳಿತ ಅಧಿಕಾರಿ ಉನೈಸ್ ಪೆರಾಜೆ ಮತ್ತು ಗೌರವಾಧ್ಯಕ್ಷ ತಾಜ್ ಮೊಹಮ್ಮದ್ ಉಪಸ್ಥಿತರಿದ್ದರು. ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಸ್ವಾಗತಿಸಿ, ಶ್ರೀಮತಿ ಶ್ರುತಿ ವಂದಿಸಿದರು.

whatsapp image 2023 08 09 at 3.26.21 pm
Sponsors

Related Articles

Back to top button