ನಿರ್ಭಯಾ ಪ್ರಕರಣ- ನಾಲ್ವರು ಅಪರಾಧಿಗಳಿಗೆ ಗಲ್ಲು….
ನವದೆಹಲಿ: ನಿರ್ಭಯಾ ಹಂತಕರಿಗೆ ಇಂದು (ಶುಕ್ರವಾರ) ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ. 2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದೆ.
ಅಪರಾಧಿಗಳಾದ ಅಕ್ಷಯ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ, ಮುಕೇಶ್ ಸಿಂಗ್ ಗೆ ಇಂದು ಬೆಳಿಗ್ಗೆ 5.30ಕ್ಕೆ ಮರಣದಂಡನೆ ಜಾರಿಗೊಳಿಸಲಾಗಿದೆ.ಹ್ಯಾಂಗ್ ಮನ್ ಪವನ್ ಅವರು ಅಪರಾಧಿಗಳನ್ನು ಗೆಲ್ಲಿಗೇರಿಸಿದ್ದಾರೆ.
ದೆಹಲಿಯ ತಿಹಾರ್ ಜೈಲಿನ ವಧಾಸ್ಥಳದಲ್ಲಿ ನಾಲ್ವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.ಈ ಮೂಲಕ ಏಳು ವರ್ಷಗಳ ಬಳಿಕೆ ನಿರ್ಭಯಾ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ.
2012 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ, ಇತ್ತ ಪಾಪಿಗಳ ಸಂಹಾರವಾಯಿತೆಂದು ದೇಶದಾದ್ಯಂತ ಸಂಭ್ರಮವನ್ನು ಆಚರಿಸಲಾಗುತ್ತಿದೆ.
ನೇಣಿಗೆ ಶರಣಾದ ನಾಲ್ವರು ದೋಷಿಗಳೂ ಇಡೀ ದೇಶವೇ ದ್ವೇಷಿದ್ದ ಪರಮ ಪಾಪಿಗಳಾಗಿದ್ದು, ಕೊನೆಗೂ ಅವರ ಸಂಹಾರವಾಗಿದೆ. ಇದರಿಂದ ನಿರ್ಭಯಾ ಆತ್ಮಕ್ಕೆ ಶಾಂತಿ ದೊರಕಿದಂತಾಗಿದೆ. ಅಲ್ಲದೆ, ನಿರ್ಭಯಾ ಪೋಷಕರ ನಿರಂತರ ಹೋರಾಟಕ್ಕೂ ಜಯ ಸಿಕ್ಕಂತಾಗಿದೆ.
ಹತ್ಯಾಚಾರಿಗಳ ಗಲ್ಲು ಕೇವಲ ನಿರ್ಭಯಾ ಪೋಷಕರಿಗಷ್ಟೇ ಸಂತಸವನ್ನು ತಂದಿಲ್ಲ. ಇಡೀ ದೇಶದ ಜನತೆಗೆ ಸಂತಸವನ್ನು ತಂದಿದೆ. ಹಂತಕರಿಗೆ ಶಿಕ್ಷೆಯಾಗುತ್ತಿದ್ದಂತೇಯ ಇಡೀ ದೇಶ ಸಂಭ್ರಮವನ್ನಾಚರಿಸುತ್ತಿದೆ.