ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ ಎಮ್ ಶಾಹೀದ್ ತೆಕ್ಕಿಲ್ ರವರಿಗೆ ಮಾತೃ ವಿಯೋಗ…

ಸುಳ್ಯ : ಖ್ಯಾತ ತೆಕ್ಕಿಲ್ ಕುಟುಂಬದ ಬಾಬ ತೆಕ್ಕಿಲ್ ಇವರ ಧರ್ಮಪತ್ನಿ ,ಕರ್ನಾಟಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅರಂತೋಡು ತೆಕ್ಕಿಲ್ ವಿದ್ಯಾಸಂಸ್ಥೆಗಳ ಸ್ಥಾಪಕರು ಆದ ಟಿ ಎಮ್ ಶಾಹೀದ್ ತೆಕ್ಕಿಲ್ ರವರ ಮಾತೃ (ತಾಯಿ) ಅಯಿಷಾ ಅಜ್ಜುಮ್ಮ (70) ಇಂದು ಅರಂತೋಡು ಸ್ವ ಗ್ರಹ ದಲ್ಲಿ ನಿಧನ ಹೊಂದಿದರು.
ಅವರು ಪತಿ ಬಾಬ ತೆಕ್ಕಿಲ್, ಪುತ್ರರಾದ ಟಿ ಎಮ್ ಶಾಹೀದ್, ಸಮೀರ್,ಜಾವೇದ್ ಹಾಗೂ ಪುತ್ರಿಯರಾದ ಜಾಹಿರ, ನಸ್ರಿನ ಬಾನು, ಮೊಮ್ಮಕ್ಕಳು, ಮರಿಮಕ್ಕಳು, ಮತ್ತು ಅಪಾರ ಕುಟುಂಬ ವೃಂದವನ್ನು ಅಗಲಿದ್ದಾರೆ.
ಸುಳ್ಯ ಅರಂತೋಡು ತೆಕ್ಕಿಲ್ ಬಾವ ಹಾಜಿಯವರ ಪತ್ನಿ, ಕೇರಳದ ಅತ್ಯಂತ ದೊಡ್ಡ ಭೂಮಾಲಿಕರಾಗಿದ್ದ ಕೂತುಪರಂಬ ಕೊಟ್ಟಾಯಂ ಪಾರಪ್ರವನ ಕುಟುಂಬದ ಸದಸ್ಯೆ ಪಯ್ಯೋಳಿ ಇರಿಂಗತ್ ನಾರಾನಂತ್ ಆಯಿಷ ಹಜ್ಜುಮ, ಕೇರಳದ ಪಾರಪ್ರನ್ ಎಂ.ಪಿ. ಅಬು ಹಾಜಿ ಸಾಹಿಬ್ ಅವರ ಪುತ್ರಿ, ಪೆರಂಬ್ರಾ ಪುತಿಯೊಟ್ಟಿಲ್ ನಾರಾನತ್ ಖಲೀಸಾ ಹಜ್ಜುಮ, ಮುಕ್ಕಂ ನಾರಾನಂತ್ ಕುಂಞ್ಞಮಿನಾ, ಇರಿಟ್ಟಿ ನಾರಾನತ್ ಮರಿಯಂ ಹಜ್ಜುಮ, ಕಾಂಗ್ರೆಸ್ ಮುಖಂಡ ದಿವಂಗತ ಪಯ್ಯೋಳಿ ಇರಿಗತ್ ನಾರಾನಾತ್ ಪಾ
ರಪ್ರವನ್ ಮಹಮ್ಮದ್, ನಾರಾನಂತ್ ಸಫಿಯಾ ಹಜ್ಜುಮ ಚೆರುವನ್ನೂರ್ ಕೋಝಿಕ್ಕೋಡ್, ಮೆಪ್ಪಯ್ಯೂರು ನಫೀಸ ,ಪಾರಪ್ರವನ್ ಮೊಯಿದು ಸಾಹಿಬ್ ಪಯ್ಯೋಲಿ ಸಹೋದರ ಸಹೋದರಿಯರು,ಕರ್ನಾಟಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್, ಕೋಝಿಕ್ಕೋಡ್ ಉದ್ಯಮಿ ಟಿ ಎಂ ಶಮೀರ್ ತೆಕ್ಕಿಲ್ , ಸುಳ್ಯದ ವ್ಯಾಪಾರಿ ಟಿ ಎಂ ಜಾವೇದ ತೆಕ್ಕಿಲ್, ಕೋಝಿಕ್ಕೋಡ್ ಮೂಝಿಕ್ಕಲ್ ರಫಿ ಅವರ ಪತ್ನಿ ಜಾಹಿರಾ ತೆಕ್ಕಿಲ್, ದಿವಂಗತ ಟಿ ಎಂ ಮುದಸ್ಸಿರ್ ನಸರ್ ತೆಕ್ಕಿಲ್, ಕಾಸರಗೋಡು ಉಪ್ಪಳ ಆಸಿಫ್ ಇಕ್ಬಾಲ್ ಮತ್ತು ಅವರ ಪತ್ನಿ ನಸ್ರೀನ ತೆಕ್ಕಿಲ್ ಅವರನ್ನು ಹಾಗೂ
ಅಪಾರ ಕುಟುಂಬ ಬಂದುಗಳನ್ನು ಅಗಲಿದ್ದಾರೆ.
ನಾಳೆ ಮಧ್ಯಾಹ್ನ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.