ಶ್ರೀ ಕೋದಂಡರಾಮ ದೇವಸ್ಥಾನ ನಾಟಿ ನರಿಕೊಂಬು- ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ…

ಬಂಟ್ವಾಳ: ಶ್ರೀ ಕೋದಂಡರಾಮ ದೇವಸ್ಥಾನ ನಾಟಿ ನರಿಕೊಂಬು ಇಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ಹಾಗೂ ಮಹಿಳಾ ಮಂಡಳಿ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡರು. ಕ್ಷೇತ್ರದ ಶ್ರೀ ಕೋದಂಡರಾಮ ದೇವರಿಗೆ, ಶ್ರೀ ಆರ್ಯ ಕಾತ್ಯಾಯಿನಿ ದೇವಿಗೆ, ಶ್ರೀ ಗರುಡ, ಶ್ರೀ ಹನುಮಂತ ದೇವರಿಗೆ ವಿಶೇಷ ಸೇವಾ ಪೂಜೆ ಹಾಗೂ ಅನ್ನದಾನ ನೆರವೇರಿತು.