ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ- “ವಿದ್ಯಾರ್ಥಿ ಶಾಲಾ ಸಂಸತ್ತು” ಚುನಾವಣೆ…
ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶಬ್ನಂ, ಉಪನಾಯಕನಾಗಿ ನಿಹಾದ್ ಆಯ್ಕೆ...
ಸುಳ್ಯ:ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ 2024-25 ರ ಶೈಕ್ಷಣಿಕ ವರ್ಷಕ್ಕೆ ಪ್ರಜಾಪ್ರಭುತ್ವದ ಮಾದರಿಯಲ್ಲಿ “ವಿದ್ಯಾರ್ಥಿ ಶಾಲಾ ಸಂಸತ್ತು” ಚುನಾವಣೆ ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶಬ್ನಂ, ಶಾಲಾ ವಿದ್ಯಾರ್ಥಿ ಉಪನಾಯಕನಾಗಿ ನಿಹಾದ್, ನೀರಾವರಿ ಮಂತ್ರಿಯಾಗಿ ಮುಬೀನ್ ಹಾಗೂ ಅನ್ಶಿಫಾ, ಕೃಷಿ ಮಂತ್ರಿಯಾಗಿ ಮಿಸ್ತಾಹ್ ಹಾಗೂ ರಿಫಾನ, ಕ್ರೀಡಾ ಮಂತ್ರಿಯಾಗಿ ಸಮದ್ ಹಾಗೂ ಶಹ್ಮ, ವಾರ್ತಾ ಮಂತ್ರಿಯಾಗಿ ಮಿಶಬ್ ಹಾಗೂ ಅನುಷ್ಕಾ, ಸಾಂಸ್ಕೃತಿಕ ಮಂತ್ರಿಯಾಗಿ ಮುಝಮ್ಮಿಲ್ ಹಾಗೂ ಹನ್ನತ್, ಆಹಾರ ಮಂತ್ರಿಯಾಗಿ ರಫೀದಾ ಹಾಗೂ ತಾಬಿಯ, ಶಿಸ್ತು ಮಂತ್ರಿಯಾಗಿ ಫರಾಝ್ ಹಾಗೂ ಶಾಝಿಮ್ ಅಫ್ತಾಬ್, ಸ್ವಚ್ಛತಾ ಮಂತ್ರಿಯಾಗಿ ಸಫ್ವಾನ್ ಹಾಗೂ ಸಫಾ, ಆರೋಗ್ಯ ಮಂತ್ರಿಯಾಗಿ ತೌಸೀಫ್ ಹಾಗೂ ರಿಫಾ ಇವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಉನೈಸ್ ಪೆರಾಜೆ, ಗೌರವಾಧ್ಯಕ್ಷರಾದ ತಾಜ್ ಮಹಮ್ಮದ್, ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಹಾಗೂ ಶಿಕ್ಷಕ ವೃಂದದವರಾದ ಸಾಧಿಕಾ,ನೌಫಿಯಾ, ಮೆಹೆಖ್ನಾಜ್, ತೌಸೀನಾ, ಮಿಸ್ರಿಯಾ, ಜಂಶೀರಾ,ಸುನೈನಾ,ಸಬೀರಾ, ಸಫ್ರೀನಾ,ಸೋನಿಯಾ, ಮಹಮ್ಮದ್ ಆರಿಫ್ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.