ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ…

ಬಂಟ್ವಾಳ: ಶ್ರೀರಾಮ ಮಂದಿರ ಕಲ್ಲಡ್ಕದಲ್ಲಿ 45ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮಕರ ಸಂಕ್ರಾಂತಿಯಂದು ನಡೆಯಿತು.
ಸಂಜೆ ಪ್ರಾರಂಭಗೊಂಡ ಸತ್ಯನಾರಾಯಣ ಪೂಜೆಯಲ್ಲಿ ವಿಶೇಷವಾಗಿ 32 ನವದಂಪತಿಗಳು ವ್ರತಧಾರಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಶುಭ ಹಾರೈಸಿದರು. ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿಯವರು ನವದಂಪತಿಗಳಿಗೆ ಶಾಲು ಹೊದಿಸಿ ಫಲಪುಷ್ಟ ನೀಡಿ ಆಶೀರ್ವದಿಸಿದರು.
ಭಗವದ್ಗೀತೆಯ 18 ಅಧ್ಯಾಯಗಳನ್ನು ಕಂಠಪಾಠ ಮಾಡಿರುವ ಶ್ರೀರಾಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು. ವಾಸವಿ ಇವರನ್ನು ಶಾಲು ಹೊದಿಸಿ ಭಗವದ್ಗೀತೆ ಸಂದೇಶ ನೀಡುವ ಫಲಕನೀಡಿ ಸನ್ಮಾನಿಸಿದರು. ಸತ್ಯನಾರಾಯಣ ಪೂಜೆಯ ಕಥೆಯನ್ನು ಗೀತಾ ಪ್ರವಚನಕಾರರು ಅಂಧರಾಗಿರುವ ಕಿರಣ್ ಕುಮಾರ್ ಪಡುಪಣಂಬೂರು ಮತ್ತು ಸಸಿಹಿತ್ತಿಲು ಯಕ್ಷಗಾನ ಮೇಳದ ಪ್ರಧಾನ ಭಾಗವತರಾದ ಪೆರ್ಲದ ಸತ್ಯನಾರಾಯಣ ಪುಣಚಿತ್ತಾಯ ಇವರು ವಿವರಿಸಿದರು. ಪೂಜೆಯನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ತಂಡ ನೆರವೇರಿಸಿದರು. ಪೂಜೆಗೆ ಆಗಮಿಸಿರುವ ಸುಮಾರು ಎರಡೂವರೆ ಸಾವಿರಕ್ಕೂ ಮಿಕ್ಕಿ ಸೇರಿದ ಭಕ್ತಾದಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಯ್ಯಪ್ಪ ಸ್ವಾಮಿ ವ್ರತಧಾರಿಗಳ ಪ್ರಾಯೋಜಕತ್ವದಲ್ಲಿ ಕಟೀಲು ಮೇಳದವರಿಂದ ದಶಾವತಾರ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಚೆನ್ನಪ್ಪ ಆರ್ ಕೋಟ್ಯಾನ್ ಸ್ವಾಗತಿಸಿ, ಕ. ಕೃಷ್ಣಪ್ಪ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button