ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2023 …

ಕಾಸರಗೋಡು: ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2023 ನ್ನು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ “ದುರ್ಗಂಬಾ ” ವೇದಿಕೆಯಲ್ಲಿ ಶ್ರೀ ವಾಮನ್ ರಾವ್ ಬೇಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು.
ದೇವಸ್ಥಾನಗಳು ಕೇವಲ ವೈದಿಕ ಕಾರ್ಯಕ್ರಮಗಳ ಸೀಮಿತತೆಯನ್ನು ದಾಟಿ ಸಾಂಸ್ಕೃತಿಕ ಬೆಳವಣಿಗೆಗೆ ವೇದಿಕೆಯಾಗಬೇಕು. ಧರ್ಮ ನಮ್ಮ ಆಚರಣೆಯಗಬೇಕು. ಅದು ಸಮಾಜದ ಸಂಸ್ಕೃತಿ ಸಂವರ್ಧನೆಗೆ ಉಪಾದಿಯಾಗಬೇಕು ಎಂದು ಅವರು ಹೇಳಿದರು.
ಧಾರ್ಮಿಕ ಮುಂದಾಳು ಕೆ ಏನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ನಗರ ಸಭಾ ಸದಸ್ಯೆ ಸವಿತಾ ಟೀಚರ್ ದಸರಾ ಮಹತ್ವವನ್ನು ತಿಳಿಸಿದರು. ಅರಿಬೈಲ್ ಗೋಪಾಲ್ ಶೆಟ್ಟಿ, ಪ್ರದೀಪ್ ಬೇಕಲ್, ರವಿ ನಾಯಿಕಾಪು, ನ್ಯಾ. ತೋಮಸ್ ಡಿ ಸೋಜಾ, ಜಗದೀಶ್ ಕೂಡ್ಲು, ಪಾಂಗೋಡು ಪ್ರವೀಣ್ ನಾಯ್ಕ್, ನಿರಂಜನ್ ಕೊರಕೋಡು,ವಿಶಾಲಕ್ಷ ಪುತ್ರಕಳ, ಜಗನ್ನಾಥ್ ಶೆಟ್ಟಿ ಪಿ ಕೆ, ಜಯಪ್ರಕಾಶ್ ಮಂಗಳೂರು ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ದಾಸ ಸಂಕೀರ್ತನ ದಶಾಹ ಸಂಕೀರ್ತನ ಸಾಮ್ರಾಟ್ ಜಯಾನಂದ ಕುಮಾರ್ ಹೊಸದುರ್ಗ ಉದ್ಘಾಟಿಸಿ, ಭಜನಾ ಗಾಯನೋತ್ಸವಕ್ಕೆ ಚಾಲನೆ ನೀಡಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ ಸ್ವಾಗತಿಸಿ, ಸಂದ್ಯಾ ರಾಣಿ ಟೀಚರ್ ವಂದಿಸಿದರು.


