ಎನ್ ಎಂ ಪಿ ಯು ಕಾಲೇಜು ಅರಂತೋಡು – ಸಾತ್ವಿ ಎಂ ವಿ, ಸಿಂಚನ ಪಿ ಪಿ, ಉಮರುಲ್ ಅದ್ನನ್ ರಾಜ್ಯ ಮಟ್ಟಕ್ಕೆ ಆಯ್ಕೆ…

ಸುಳ್ಯ: ಪೋಪ್ಯುಲರ್ ಎಜುಕೇಷನ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟಿರುವ ಎನ್ ಎಂ ಪಿ ಯು ಕಾಲೇಜು ಅರಂತೋಡು ಇಲ್ಲಿನ ವಿದ್ಯಾರ್ಥಿಗಳಾದ ಸಾತ್ವಿ ಎಂ ವಿ, ಸಿಂಚನ ಪಿ ಪಿ, ಉಮರುಲ್ ಅದ್ನನ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಮಾರಿ ಸಾತ್ವಿ ಎಂ ವಿ ಕಬಡ್ಡಿ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ 2019-20 ನೇ ಸಾಲಿನಲ್ಲಿ ಛತ್ತೀಸಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ. ಈಕೆ ಅರಂತೋಡು ಗ್ರಾಮದ ವೆಂಕಟರಮಣ ಮೇರ್ಕಜೆ ಮತ್ತು ಶ್ರೀಮತಿ ಭಾರತಿ ವೆಂಕಟರಮಣ ಇವರ ಮಗಳು. ಪ್ರಸ್ತುತ ಎನ್ ಎಂ ಪಿ ಯು ಕಾಲೇಜು ಅರಂತೋಡಿನಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ.

ಕುಮಾರಿ ಸಿಂಚನ ಪಿ ಪಿ ತ್ರೋಬಾಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಪುರುಷೋತ್ತಮ ಪಿಂಡಿಮನೆ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ಪ್ರಸ್ತುತ ಎನ್ ಎಂ ಪಿ ಯು ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ.

ಉಮರುಲ್ ಅದ್ನನ್ ಫುಟ್ಬಾಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಅರಂತೋಡು ಗ್ರಾಮದ ಅಬ್ದುಲ್ ಖಾದರ್ ಮತ್ತು ಜೈನಾಬಿ ದಂಪತಿಯ ಪುತ್ರ. ಪ್ರಸ್ತುತ ಎನ್ ಎಂ ಪಿ ಯು ಕಾಲೇಜು ಅರಂತೋಡಿನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ.

Sponsors

Related Articles

Back to top button