ಸಹ್ಯಾದ್ರಿಯಲ್ಲಿ “ಫಿಟ್ ಇಂಡಿಯಾ ವಾಕಥಾನ್” ….
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ನೆನಪಿಗಾಗಿ, ಸಹ್ಯಾದ್ರಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗೌರವಾನ್ವಿತ ಪ್ರಧಾನ ಮಂತ್ರಿ ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಸಂದರ್ಭದಲ್ಲಿ ಪ್ರಾರಂಭಿಸಿದ “ಫಿಟ್ ಇಂಡಿಯಾ ವಾಕಥಾನ್” ಅಭಿಯಾನದಲ್ಲಿ ಪಾಲ್ಗೊಂಡರು ಮತ್ತು ತಮ್ಮನ್ನು ತಾವು ಸದೃಢ ಹಾಗು ಫಿಟ್ ಆಗಿರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
ಸಹ್ಯಾದ್ರಿ ಎನ್‌ಎಸ್‌ಎಸ್ ಘಟಕವು ದೈಹಿಕ ಶಿಕ್ಷಣ ಇಲಾಖೆ ಮತ್ತು ಸಹ್ಯಾದ್ರಿ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ 2019 ರ ಆಗಸ್ಟ್ 29 ರಂದು ನಮ್ಮ ಪ್ರಧಾನಿ “ಫಿಟ್ ಇಂಡಿಯಾ ವಾಕಥಾನ್” ಪ್ರಾರಂಭಿಸಿದ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಲಾಯಿತು. ಎಲ್ಲಾ ಶಿಕ್ಷಕ ವರ್ಗ ಮತ್ತು ಸಿಬ್ಬಂದಿಯವರು ವಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಾಗೂ ವಿದ್ಯಾರ್ಥಿಗಳಿಗೆ 10,000 ಹೆಜ್ಜೆಗಳ ಸವಾಲು ನಡೆಯಿತು.
ಸಹ್ಯಾದ್ರಿ ಕಾಲೇಜ ಪ್ರಾಂಶುಪಾಲ ಡಾ. ಆರ್. ಶ್ರೀನಿವಾಸ ರಾವ್ ಕುಂಟೆ ಇವರು ನಿಶಾನೆ ತೋರಿಸಿ ವಾಕಥಾನ್ ಪ್ರಾರಂಭ ಮಾಡಿದರು. ಶಿಕ್ಷಕ ವರ್ಗ ಮತ್ತು ಸಿಬ್ಬಂದಿ ಕ್ಯಾಂಪಸ್ ಸುತ್ತಲೂ ಮೂರು ಸುತ್ತಿನ ನಡಿಗೆ ಮಾಡಿದರು. ಭಾರೀ ಮಳೆಯ ನಡುವೆಯೂ ಅಧ್ಯಾಪಕರು ವಾಕಥಾನ್ ಮುಂದುವರೆಸಿ ಪೂರ್ಣಗೊಳಿಸಿದರು.