ಕಲೆ/ಸಾಹಿತ್ಯ

ಅಮ್ಮ…

ಅಮ್ಮ…

ಅಮ್ಮ ನಿನ್ನ ನೆನಪುಗಳೇ
ನಿತ್ಯ ನೂತನ
ದಿನ ದಿನವೂ ಹೊತ್ತು
ತಂದೆ ದಿವ್ಯ ಚೇತನ

ಬೆರಗು ಕಣ್ಣಿನಿಂದ ನೋಡೆ
ಎಲ್ಲವಯೋಮಯವಾಗಿರೆ
ಬೆದರಿ ಕುಳಿತ ನನ್ನ
ಮಡಿಲೊಳಿಟ್ಟು ಸಲಹಿದೆ

ತಪ್ಪು ಹೆಜ್ಜೆ ಹಾಕಿಕೊಂಡು
ಎದ್ದು ಬಿದ್ದು ನಡೆಯುತಿರಲು
ಮುಚ್ಚಿ ಮನದ ದುಗುಡ
ಮೊಗದಿ ನಗುವ ಹರಿಸಿದೆ

ಅಕ್ಕರೆಯಲಿ ತಿದ್ದಿ ತೀಡಿ
ಅಕ್ಕರಗಳ ಸವಿಯ ಕಲಿಸಿ
ಓದಿ ಬರೆವ ಸುಖದ
ಸವಿಯ ನನಗೆ ಹಂಚಿದೆ

ರಚನೆ:ಡಾ. ವೀಣಾ ಎನ್ ಸುಳ್ಯ

Advertisement

Related Articles

Back to top button