ರಾಮ ನಿನ್ನಯ ಮನದಿ ನೆನೆಯುತ…

ರಾಮ ನಿನ್ನಯ ಮನದಿ ನೆನೆಯುತ…
ರಾಮ ನಿನ್ನಯ ಮನದಿ ನೆನೆಯುತ
ಬಾಳ ಬೆಳಕನು ಕಂಡ ಮಹಿಮರು
ನಮ್ಮ ಬಾಳಿಗೆ ದಾರಿ ತೋರುತ ನಡೆದು ಬದುಕಿಹರು
ನಿನ್ನ ಜೊತೆಗೆ ಹೆಜ್ಜೆ ಹಾಕುತ
ನಿನ್ನ ಭಾವದಿ ಜೀವ ಪಡೆಯುತ
ಒಂದು ಚಣವೂ ನಿನ್ನನಗಲದೆ ನಡೆದ ಲಕ್ಷ್ಮಣನು
ನೀನೆ ಎಲ್ಲವು ಎಂದು ನಂಬುತ
ನಿನ್ನ ಕರವನು ಹಿಡಿದು ನಡೆಯಲು
ನಿನ್ನ ಸುಖದಲಿ ಸುಖವ ಕಾಣುತ ಹೆಜ್ಜೆಹಾಕಿರಲು
ನಿನ್ನನಗಲುತಯಿರಲು ಜಾನಕಿ ರಾಮಮಂತ್ರವೇ ಉಸಿರ ನೀಡುತ
ನಿನ್ನ ಬರವಿಗೆ ಕಾಯುತಿರಲು ರಕ್ಷೆಯಾಯಿತಲೇ
ನಿನ್ನ ಹೆಸರನು ಕೇಳಿ ತಿಳಿಯಲು
ನಿನ್ನ ಕಾಣುವ ಬಯಕೆಯೊಂದೇ
ತನು ಮನವನು ಹಿಡಿದು ಕಾಯುತಲಿರಲು ಶಬರಿಯದು
ಹಣ್ಣುಹಣ್ಣಲಿ ನಿನ್ನ ಕಾಣುತ ತರುಲತೆಗಳೇ ಬಳುಕಿ ಬಾಗಲು
ನಿನ್ನಾಗಮನವ ಕಣ್ಣು ಮುಚ್ಚದೆ ಕಾಯ್ವ ನೋಂಪಿನಲಿ
ನಿನ್ನ ಹೆಸರನು ಉಸಿರನಾಗಿಸಿ
ಬದುಕಿ ಬಾಳಿದ ಎಲ್ಲ ಜೀವವು
ನಿನ್ನ ಪಡೆಯುತ ಹೊಂದಿ ನಡೆಯಲು ಸಾಯುಜ್ಯವನೇ
ನಿನ್ನ ನಾಮದ ಮಹಿಮೆ ಕಾಣುತ ಜನರು ಜಪಿಸಲು ನಿನ್ನ ನಾಮವ
ಮುದದಿ ಕರುಣಿಸು ಶಾಂತಿ ನೆಮ್ಮದಿ ಎಲ್ಲ ಮನಗಳಿಗೆ
ರ: ಡಾ. ವೀಣಾ ಎನ್ ಸುಳ್ಯ