ಆ. 24: ಮೂಡುಬಿದಿರೆ ಜೈನ ಮಠದಲ್ಲಿ ಮಂದಾರರ ‘ಬೀರದ ಬೊಲ್ಪು’ ತುಳು ಕಾವ್ಯಯಾನ ಸುಗಿಪು -ದುನಿಪು…

ಮಂಗಳೂರು: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ತುಳುವ ಮಹಾಸಭೆ ಮೂಡುಬಿದಿರೆ, ಮಂದಾರ ಪ್ರತಿಷ್ಠಾನ ಮಂಗಳೂರು, ತುಳುಕೂಟ ಬೆದ್ರ ಇವರ ಸಂಯುಕ್ತ ಆಶ್ರಯದಲ್ಲಿ ‘ತುಳು ಕಾವ್ಯ ಯಾನ-28’ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ ವಿರಚಿತ ‘ಬೀರದ ಬೊಲ್ಪು’ ಶ್ರೀಕೃಷ್ಣನ ಬಾಲ ಲೀಲೆಯ ಕುರಿತ ‘ಸುಗಿಪು – ದುನಿಪು’ ವಾಚನ – ವ್ಯಾಖ್ಯಾನ ಕಾರ್ಯಕ್ರಮವನ್ನು ಅಗಸ್ಟ್ 24 ರಂದು ಸಂಜೆ 3 ಗಂಟೆಗೆ ಮೂಡಬಿದಿರೆಯ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನ ಶ್ರೀ ದಿಗಂಬರ ಜೈನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಾವ್ಯದ ವ್ಯಾಖ್ಯಾನ ನೀಡಲಿದ್ದಾರೆ. ಯುವ ಭಾಗವತರಾದ ಪ್ರಶಾಂತ ರೈ ಪುತ್ತೂರು ಮತ್ತು ರಚನಾ ಚಿತ್ಕಲ್ ವಾಚನ ಮಾಡುವರು. ಯಕ್ಷದೇವ ಮಿತ್ರ ಮಂಡಳಿಯ ಎಂ. ದೇವಾನಂದ ಭಟ್ ಬೆಳುವಾಯಿ ಮದ್ದಳೆ ನುಡಿಸುವರು.
ಮಂದಾರ ಪ್ರತಿಷ್ಠಾನದ ಡಾ. ರಾಜೇಶ್ ಭಟ್ ಸಹಕಾರದೊಂದಿಗೆ ತುಳುವರ್ಲ್ಡ್ ಫೌಂಡೇಶನ್ ನ ಡಾ. ರಾಜೇಶ ಆಳ್ವ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ದೀಪ ಬೆಳಗಿಸಿ ಕಾವ್ಯಯಾನಕ್ಕೆ ಚಾಲನೆ ನೀಡಲಿದ್ದಾರೆ.
ಬೆದ್ರ ತುಳುಕೂಟದ ಧನಕೀರ್ತಿ ಬಲಿಪ, ಚಂದ್ರಹಾಸ ದೇವಾಡಿಗ, ಮಂದಾರರ ಪುತ್ರಿ ಶಾರದಾಮಣಿ, ತುಳುವ ಮಹಾಸಭೆ ಮೂಡುಬಿದಿರೆ ಸಂಚಾಲಕಿ ಜಯಂತಿ ಎಸ್. ಬಂಗೇರ ಉಪಸ್ಥಿತರಿರುವರು ಎಂದು ತುಳುವ ಮಹಾಸಭೆ ಮುಖ್ಯ ಸಂಚಾಲಕ ಪ್ರಮೋದ್ ಸಪ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.