ಕಾಫಿಕೋ -ದಕ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನ- ಉದ್ಘಾಟನೆ ಮತ್ತು ಕಾರ್ಯಾಗಾರಕ್ಕೆ ಆ. 25 ರಂದು ಚಾಲನೆ…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ಒಂದು ವಿನೂತನ ಪ್ರಯತ್ನವಾಗಿ “ಕಾಫಿಕೋ” ಕಾರ್ಯಾಗಾರ ಕಾರ್ಯಕ್ರಮವನ್ನು ಆ. 25 ರಂದು ಸುಳ್ಯದ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ನೆರವೇರಿಸಲಿದ್ದಾರೆ. 7 ಬೀನ್ ಟೀಮ್, ಬೆಂಗಳೂರು ಇದರ ಚೇರ್ಮನ್ ಡಾ. ಧರ್ಮರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಕಾಫಿ ಉದ್ಯಮ ಹಾಗೂ ಕಾಫಿ ಉತ್ಪಾದಕರಿಗೆ ಹೊಸ ಅವಕಾಶಗಳು, ತಂತ್ರಜ್ಞಾನ ಮತ್ತು ಮಾರುಕಟ್ಟೆ ವಿಸ್ತರಣೆಯ ಕುರಿತ ಚರ್ಚೆ ನಡೆಯಲಿದ್ದು, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ, ಶ್ರೀ ದಿನೇಶ್ ಎಂ. ಜಿ (ಚೇರ್ಮನ್, ಕಾಫಿ ಮಂಡಳಿ, ಭಾರತ), ಶ್ರೀಮತಿ ಸಂಗೀತ ಕರ್ತ (ಡಿ.ಡಿ.ಎಂ. ನಬಾರ್ಡ್, ಮಂಗಳೂರು), ಶ್ರೀ ಮಂಜುನಾಥ್ (ಡಿ.ಡಿ., ತೋಟಗಾರಿಕೆ ಇಲಾಖೆ, ಮಂಗಳೂರು), ಶ್ರೀ ನಂದಕುಮಾರ್ ಎ. ಪಿ (ಉಪ ನಿರ್ದೇಶಕರು (ವಿಸ್ತರಣೆ), ಕಾಫಿ ಮಂಡಳಿ, ಮಡಿಕೇರಿ) ಉಪಸ್ಥಿತರಿರಲಿದ್ದಾರೆ ಎಂದು ಕಾಫಿ ಬೆಲೆ ಉತ್ತೇಜನ ಕಾರ್ಯಾಗಾರ ಸಮಿತಿಯ ಸಂಚಾಲಕ ಶ್ರೀ ಸಂತೋಷ್ ಕುತ್ತಮೊಟ್ಟೆ ಹಾಗೂ ಸಹ ಸಂಚಾಲಕ ಶ್ರೀ ರಾಮಕೃಷ್ಣ ಭಟ್ ತಿಳಿಸಿದ್ದಾರೆ.