SYS ಗಾಂಧಿನಗರ ಬ್ರಾಂಚ್ ವತಿಯಿಂದ ಅನುಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ…

ಸುಳ್ಯ: ಸುನ್ನಿ ಯುವಜನ ಸಂಘ SYS ಗಾಂಧಿನಗರ ಬ್ರಾಂಚ್ ಸಹಕಾರಿಯಾದ ಕೆಸಿಎಫ್ ಒಮಾನ್ ಸಲಾಲ ಝೋನ್ ಅಧ್ಯಕ್ಷ ರಾದ ಅಬ್ದುಲ್ ಲತೀಫ್ ಕುತ್ತಮೊಟ್ಟೆ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು ಮತ್ತು ತಾಯಕ್ಕೋಡ್ ಅಬ್ದುಲ್ಲಾ ಉಸ್ತಾದ್ ಹಾಗೂ ಹಾರಿಸ್ ಸಖಾಫಿ ಬೇವಿಂಜೆ ಹೆಸರಿನಲ್ಲಿ ತಹಲೀಲ್ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್ ಮತ್ತು ಉಪಾಧ್ಯಕ್ಷರಾದ ನಿಝಾರ್ ಸಖಾಫಿ ಸ್ವಾಗತಿಸಿದರು.
ಯಸ್ ವೈ ಯಸ್ ರಾಜ್ಯ ನಾಯಕರಾದ ಅಬ್ದುಲ್ ಹಮೀದ್ ಬೀಜಕೋಚ್ಚಿ , ಗ್ರೀನ್ ವ್ಯೂ ಶಾಲೆ ಎಚ್ ಎಂ ಅಬ್ದುಲ್ ರಹ್ಮಾನ್ ಮತ್ತು ಲತೀಫ್ ಸಖಾಫಿ ಗೂನಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು.
ಮುಹಿಯುದ್ದಿನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಮುಸ್ತಾಫಾ ಕೆ ಎಂ, ಅಬ್ದುಲ್ ಖಾದರ್ ಮುಸ್ಲಿಯಾರ್ , ಅಝಿಝ್ ಫುಟ್ ವೇರ್,ಅಬೂಬಕ್ಕರ್ ಜಟ್ಟಿಪಳ್ಳ ,ಮುಹಮ್ಮದ್ ಪೈಂಟರ್, SSF ನಾಯಕರಾದ ನೌಶಾದ್ ಕೆರಮೂಲೆ ಉಪಸ್ಥಿತರಿದ್ದರು ಬ್ರಾಂಚಿನ ಪ್ರಧಾನ ಕಾರ್ಯದರ್ಶಿ ಆರೀಸ್ ಸಿ ಎ ವಂದಿಸಿದರು.

6936f06b F6a3 44ff Be57 779f5d02f252 300x225

5ef89bba B91e 44af 898b 3fe75d12fe98 300x225

Related Articles