ಸುಳ್ಯ – ಕೇರ್ಪಳ ಚಂದ್ರಪ್ರಕಾಶ ಅವರಿಗೆ ಮಲೆನಾಡು ಪರಿಸರ ಮಿತ್ರ ಪ್ರಶಸ್ತಿ…

ಸುಳ್ಯ: ಗಿಡನೆಟ್ಟು ಪರಿಸರ ಉಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸುಳ್ಯ ಕೇರ್ಪಳದ ಚಂದ್ರಪ್ರಕಾಶ ಅವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಲೆನಾಡ ಪರಿಸರ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ರ ನೇತೃತ್ವದಲ್ಲಿ ಚಂದ್ರಪ್ರಕಾಶರ ಮನೆಗೆ ತೆರಳಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹಮೀದ್ ಜನತಾ, ಮಜೀದ್ ಜನತಾ, ಕೆ.ಎಂ.ಮುಸ್ತಫಾ, ಸಿದ್ದಿಕ್ ನಾವೂರು, ಬಾಲಚಂದ್ರ ಕೇರ್ಪಳ, ಡಾ.ಚಂದ್ರಶೇಖರ್ , ಇಬ್ರಾಹಿಂ ಕೆ.ಬಿ, ಅಮರ್ ಮೊದಲಾದವರು ಇದ್ದರು. ಚಂದ್ರಪ್ರಕಾಶ್ ಕೇರ್ಪಳ, ಅವರ ತಾಯಿ ಯಶೋದ ಹಾಗೂ ಮನೆಯವರು ಇದ್ದರು.
ಚಂದ್ರಪ್ರಕಾಶ ಅವರು ವರ್ಷಂಪ್ರತಿ ಸರಕಾರಿ ಕಚೇರಿಗಳ ಆವರಣ, ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಉಳಿವಿಗೆ ಶ್ರಮಿಸುತ್ತಿದ್ದಾರೆ.

Related Articles

Back to top button