ಬಂಟ್ಚಾಳ- ಅಟೋ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಚೆಂಡ್ತಿಮಾರ್ ಆಯ್ಕೆ…

ಬಂಟ್ಚಾಳ: ಅಟೋ ರಿಕ್ಷಾ ಚಾಲಕ- ಮಾಲಕರ (ಬಿ.ಎಂ.ಎಸ್) ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸತತವಾಗಿ ಎರಡನೇ ಬಾರಿಗೆ ವಿಶ್ವನಾಥ ಚೆಂಡ್ತಿಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ರಿಕ್ಷಾ ಚಾಲಕ- ಮಾಲಕರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಗೌರವಾಧ್ಯಕ್ಷರಾಗಿ ವಸಂತ ಮಣಿಹಳ್ಳ, ಕಾರ್ಯದರ್ಶಿಯಾಗಿ ಶ್ರೀಕಾಂತ್ ಪಾಣೆಮಂಗಳೂರು, ಕೋಶಾಧಿಕಾರಿಯಾಗಿ ರವಿ ಪಾಣೆಮಂಗಳೂರು ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ತಲೆಂಬಿಲ ಹಾಗೂ ವಿವಿಧ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.