ಸಹಬಾಳ್ವೆ ಸಹಕಾರ ಸಮರ್ಪಣಾ ಭಾವ ಬೆಳವಣಿಗೆಗೆ ಪೂರಕ : ಈಶ್ವರ ಪ್ರಸಾದ…
ಬಂಟ್ವಾಳ: ಸಹಬಾಳ್ವೆ, ಸಹಕಾರ, ಸಮರ್ಪಣಾಭಾವ ಮನುಷ್ಯನ ಬೆಳವಣಿಗೆಗೆ ಪೂರಕವಾಗಿದೆ. ಕ್ರೀಯಾಶೀಲರಾಗಿ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಂಘಟಿತವಾಗಿ ಕೆಲಸ ಮಾಡಬೇಕು . ಬಿಂದು ಸಿಂಧುವಾಗಿ ರೂಪುಗೊಳ್ಳಲು ಯುವ ಜನತೆಗೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ ಎಂದು ಕನ್ಯಾನ ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಈಶ್ವರ ಪ್ರಸಾದ ಹೇಳಿದರು.
ಅವರು ಶ್ರೀರಾಮಚಂದ್ರಪುರ ಮಠ ಪೆರಾಜೆ ಮಾಣಿಯಲ್ಲಿ ಡಿ. 3 ರಂದು ನಡೆದ ಉಪ್ಪಿನಂಗಡಿ ಮಂಡಲದ ವಿದ್ಯಾರ್ಥಿ ಯುವ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಂತರಾಷ್ಟ್ರೀಯ ಚೆಸ್ ಕ್ರೀಡಾಪಟು ಇಶಾ ಶರ್ಮ ಕಾಂತಾಜೆ , ರಾಷ್ಟ್ರೀಯ ಕಾಮನ್ ವೆಲ್ತ್ ಕ್ರೀಡಾಪಟು ದೀಪ್ತಿ ಲಕ್ಷ್ಮಿ ಚಿಕ್ಕಮುಂಡೇಲು ಉದ್ಘಾಟಿಸಿದರು. ಉಪ್ಪಿನಂಗಡಿ ಹವ್ಯಕ ಮಂಡಲದ ಅಧಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಶುಭ ಹಾರೈಸಿ ಮಾತನಾಡಿದರು.
ಅತಿಥಿಗಳಾಗಿ ಶ್ರೀರಾಮಚಂದ್ರಾಪುರ ಮಠದ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಶುಭ ಕೋರಿದರು. ವಿಷ್ಣುಗುಪ್ತ ವಿದ್ಯಾಪೀಠ ಅಶೋಕೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ , ಮಹಾಮಂಡಲದ ಪ್ರಮುಖರಾದ ಬಾಲಸುಬ್ರಮಣ್ಯ ಭಟ್ ಸರ್ಪಮೂಲೆ , ಹೇರಂಭ ಶಾಸ್ತ್ರಿ, ಮಹೇಶ ಚೂಂತಾರು, ದೇವಿಕಾ ಶಾಸ್ತ್ರೀ, ಅರವಿಂದ ದರ್ಭೆ, ಪರಮೇಶ್ವರ ಭಟ್ ವೇಣೂರು , ಶೈಲಜಾ ಭಟ್ ಕೆ.ಟಿ. ಮೊದಲಾದವರು ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜು ಪುತ್ತೂರಿನ ರೋವರ್‍ಸ- ರೇಂಜರ್‍ಸ್ ತಂಡವನ್ನು ಅಭಿನಂದಿಸಲಾಯಿತು. ಅವನೀಶ ಪೆರಿಯಡ್ಕ ನಿರೂಪಿಸಿ ವಂದಿಸಿದರು. ಆರಂಭದಲ್ಲಿ ಪಥಸಂಚನದ ಬಳಿಕ ದಿನವಿಡಿ ಬೌದ್ಧಿಕ ಸ್ಪರ್ಧೆಗಳು ಮತ್ತು ಹೊರಾಂಗಣ ಒಳಾಂಗಣ ಆಟಗಳು ಜರಗಿತು. ಸಮಾರೋಪ ಸಮಾರಂಭದಲ್ಲಿ ಹವ್ಯಕ ಮಂಡಲಾಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ ಇವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಿಸಲಾಯಿತು.