2013 ಕ್ಕಿಂತ ಮುಂಚಿತವಾಗಿ ಕನ್ವರ್ಷನ್ ಆದ ತುಂಡು ಭೂಮಿ ಸಮಸ್ಯೆ ಯನ್ನು ಶೀಘ್ರ ಪರಿಹರಿಸುವಂತೆ ಪೌರಾಡಳಿತ ಸಚಿವ ರಹೀo ಖಾನ್ ರಿಗೆ ಎಸ್ ಸಂಶುದ್ದೀನ್, ಕೆ. ಎಂ ಮುಸ್ತಫ ಮನವಿ…

ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ 2013 ರ ನಂತರ ನಗರ ಯೋಜನಾ ಪ್ರಾಧಿಕಾರದ ಅನುಮೋದನೆಯ ಕಾನೂನು ಅನ್ವಯಿಸಲಾಗುತ್ತಿದ್ದು, ಅದಕ್ಕೆ ಮುಂಚಿತವಾಗಿ ಭೂ ಪರಿವರ್ತನೆ ಗೊಂಡ ನಿವೇಶನಗಳು ಆ ಸಮಯದಲ್ಲಿ ಇರುವ ಕಾನೂನಿನoತೆ ವ್ಯವಹರಣೆ ಗೊಂಡಿರುತ್ತದೆ.

ಸದ್ರಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ,ದುರಸ್ತಿ, ವಿಸ್ತರಣೆ, ಫಾರಂ 3 ಖಾತೆ, ಪರಭಾರೆ ಮೊದಲಾದ ಕಾರ್ಯಗಳಿಗೆ ಸೂಡ ಅನುಮೋದನೆ ಪಡೆಯುವುದು ಅಸಾಧ್ಯವಾಗಿರುತ್ತದೆ. ಆದ್ದರಿಂದ 2013 ಕಟ್ ಆಫ್ ದಿನಾಂಕ ನಿಗದಿಪಡಿಸಿ, ಭೂಮಿದಾ ಖಲೆ ಗಳನ್ನು, ಖಾತೆಗಳನ್ನು ನೀಡಲು 2013 ಕ್ಕಿಂತ ಮುಂಚಿತವಾಗಿ ಕನ್ವರ್ಷನ್ ಆದ ಭೂಮಿ, ನಿರ್ಮಾಣ ಗಳ ಅಭಿವೃದ್ಧಿಗೆ ಸೂಡ ನಿಯಮಗಳಿಂದ ವಿನಾಯಿತಿ ನೀಡಿ, ನಗರ ಪಂಚಾಯತ್ ನಲ್ಲಿಯೇ ಈ ಬಗ್ಗೆ ಖಾತೆ ಮತ್ತು ಕಟ್ಟಡ ಪರವಾನಿಗೆ, ಅಭಿವೃದ್ಧಿ ಗೆ ಅನುಮತಿ ನೀಡಲು ಸೂಕ್ತ ಕ್ರಮ ಕೈಗೊಂಡು ಆದೇಶ ನೀಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಮಾಜಿ ಸದಸ್ಯ ಕೆ. ಎಂ. ಮುಸ್ತಫ, ಉಪಸ್ಥಿತರಿದ್ದರು.

Sponsors

Related Articles

Back to top button