ಅರಂತೋಡು ಸಮಸ್ತ ಸ್ಥಾಪನ ದಿನ…
ಸುಳ್ಯ: ಉಲಮಾ ಒಕ್ಕೂಟ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ 99 ನೆ ಸ್ಥಾಪನಾ ದಿನಾಚರಣೆಯನ್ನು ಜೂ 26 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.
ಧ್ವಜಾರೋಹಣ ವನ್ನು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಸ್ಥಳೀಯ ಖತೀಬರಾದ ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿ ಸಮಸ್ತ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.ಜಮಾ ಆತ್ ಕಾರ್ಯದರ್ಶಿ ಕೆ.ಎಂ ಮೂಸಾನ್,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೇರ್,ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ನೌಶಾದ್ ಅಝ್ ಹರಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಷನ್ ಅಧ್ಯಕ್ಷ ಮಜೀದ್,ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್,ಆಶಿಕ್,ಮುಜಮ್ಮಿಲ್,ಮುಜೀಬ್,ಮುಸ್ತಾಫಾ, ಇಕ್ಬಾಲ್,ತಾಜುದ್ದೀನ್ ಅರಂತೋಡು,ಸೇರಿದಂತೆ ಮದರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.