ಪುತ್ತೂರು ನಗರಸಭಾ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಹಾನಿ……
ಪುತ್ತೂರು:ಇಲ್ಲಿನ ನಗರಸಭೆ ಕಟ್ಟಡದ ಕಿಟಕಿಗಳಿಗೆ ಅಳವಡಿಸಲಾದ ಗಾಜಿಗೆ ಮಂಗಳವಾರ ರಾತ್ರಿ ಯಾರೋ ಕಿಡಿಗೇಡಿಗಳು ಕಲ್ಲೆಸೆದು ಗಾಜು ಪುಡಿ ಮಾಡಿ ಹಾನಿ ನಡೆಸಿರುವ ಘಟನೆ ನಡೆದಿದೆ.
ಪುತ್ತೂರು ಕಿಲ್ಲೆ ಮೈದಾನ ಪಕ್ಕದಲ್ಲಿರುವ ನಗರಸಭಾ ಕಟ್ಟಡಕ್ಕೆ ರಾತ್ರಿ ಸುಮಾರು 9.30ರ ಹೊತ್ತಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಾನಿ ಮಾಡಿರುವ ಸಿಸಿ ಕ್ಯಾಮರಾದಿಂದ ತಿಳಿದುಬಂದಿದೆ.
ಈ ಬಗ್ಗೆ ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ ನಗರಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ನಗರಸಭಾ ಕಟ್ಟಡ ಒಳಭಾಗದಲ್ಲಿ ಮಾತ್ರ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಲಾಗಿಲ್ಲ. ಆದರೆ ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮರಾ ಗಳಿಂದ ಕಿಡಿಗೇಡಿಗಳನ್ನು ಪತ್ತೆ ಮಾಡಲು ಸಾಧ್ಯವಿದ್ದು, ಈ ಬಗ್ಗೆ ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.