ಸುಳ್ಯ – ಯುವಜನ ಸಂಯುಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ದಯಾನಂದ ಕೇರ್ಪಳ…

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿಯ 2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ದಯಾನಂದ ಕೇರ್ಪಳ,
ಕಾರ್ಯದರ್ಶಿ ಯಾಗಿ ಸತೀಶ್‌ ಮೂಕಮಲೆ, ಕೋಶಾಧಿಕಾರಿಯಾಗಿ ವಿಜಯ ಕುಮಾರ್‌ ಉಬರಡ್ಕ ಆಯ್ಕೆಯಾಗಿದ್ದಾರೆ.
ಇಂದು ನಡೆದ ಯುವಜನ ಸಂಯುಕ್ತ ಮಂಡಳಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನಿಲ್‌ ಪೂಜಾರಿಮನೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಕ್ರೀಡೆ ಹಾಗೂ ಸೇವಾಧಿಕಾರಿ ವೆಂಕಟ್ರಮಣ ಯು.ಎಸ್‌., ಮಂಡಳಿಯ ಗೌರವ ಸಲಹೆಗಾರ ನ್ಯಾಯವಾದಿ ದಿಲೀಪ್‌ ಬಾಬ್ಲು ಬೆಟ್ಟು ಭಾಗವಹಿಸಿದ್ದರು.
ಕೊರೊನಾ ಕಾಲದಲ್ಲಿ ವಾರಿಯರ್‌ ಆಗಿ ಸೇವೆ ಸಲ್ಲಿಸಿದರೆಂಬ ಕಾರಣಕ್ಕೆ ಮಂಡಳಿ ಗೌರವ ಸಲಹೆಗಾರ, ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್‌ ಅಂಬೆಕಲ್ಲುರನ್ನು ಸನ್ಮಾನಿಸಲಾಯಿತು. ಮಂಡಳಿಯ ಗೌರವ ಸಲಹೆಗಾರ ದಿನೇಶ್‌ ಮಡಪ್ಪಾಡಿ ಅಭಿನಂದನಾ ಭಾಷಣ ಮಾಡಿದರು. ಗೌರವಾಧ್ಯಕ್ಷ ಶಂಕರ್ ಪೆರಾಜೆ, ನೆಹರು ಯುವ ಕೇಂದ್ರದ ಪ್ರತಿನಿಧಿ ಪ್ರತಿಭಾ ಕಾಯರ ಮೊದಲಾದವರು ಉಪಸ್ಥಿತರಿದ್ದರು.

IMG 20210918 155133 300x202

Related Articles