ಮೈ ಡೇ, ಮೈ ಯೂತ್ ಡೇ – SSF ಸದಸ್ಯತನ ಅಭಿಯಾನ ಉದ್ಘಾಟನೆ…

ಸುಳ್ಯ: ಹೃದಯವಿದೆಯಾ ? ಸತ್ಯದ ಧ್ವನಿಯಾಗಲು ಎಂಬ ಧ್ಯೇಯದೊಂದಿಗೆ ನ. 13 ರಿಂದ 30ರ ವರೆಗೆ ನಡೆಯುವ SSF ಸದಸ್ಯತನ ಅಭಿಯಾನದ ಗಾಂಧಿನಗರ ಶಾಖಾ ಮಟ್ಟದ ಮೈ ಡೇ, ಮೈ ಯೂತ್ ಡೇ ಉದ್ಘಾಟನೆ ನ. 13ರಂದು ಜುಮಾ ನಮಾಝ್ ಬಳಿಕ SSF ಗಾಂಧಿನಗರ ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ ಅಧ್ಯಕ್ಷತೆಯಲ್ಲಿ ಗಾಂಧಿನಗರ ಸುನ್ನಿ ಸೆಂಟರ್ ನಲ್ಲಿ ಜರಗಿತು.
ಸದಸ್ಯತನದ ಪೋಸ್ಟರ್ ಪ್ರದರ್ಶನವನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೆರವೇರಿಸಿದರು. SSF ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ ಸದಸ್ಯತನಕ್ಕೆ ಚಾಲನೆ ನೀಡಿದರು. ಅಬ್ದುರ್ರಶೀದ್ ಝೈನಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಫುದ್ದೀನ್ ಅಶ್ರಫಿ ದುಆ ನೆರವೇರಿಸಿದರು.
ಸುಳ್ಯ ತಾಲೂಕು ಮುಸ್ಲಿಂ ಜಮಾಅತ್ ಸಂ. ಕಾರ್ಯದರ್ಶಿ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್.ವೈ.ಎಸ್ ನಾಯಕರಾದ ಸಿದ್ದೀಖ್ ಕಟ್ಟೆಕಾರ್, ಮುಹಮ್ಮದ್ ಸಿ.ಎ, ಅಬ್ದುಲ್ ಖಾದರ್, ಹಾರಿಸ್ ಸಿ.ಎ ಎಸ್ಸೆಸ್ಸೆಫ್ ನಾಯಕರಾದ ಕಬೀರ್ ಜಟ್ಟಿಪಳ್ಳ, ನೌಶಾದ್ ಕೆರೆಮೂಲೆ ಉಪಸ್ಥಿತರಿದ್ದರು.
ಶಾಖಾ ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ ಆರಿಫ್ ಬುಶ್ರಾ ವಂದಿಸಿದರು.

47de8b15 138a 4d77 8f23 Ee405ac9b77b 300x135

15e119be 6e2f 4881 9801 20066d74fa1e 300x135

 

 

Related Articles

Leave a Reply

Your email address will not be published. Required fields are marked *