ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕ- 100 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ…

ದಾನ ಧರ್ಮಗಳು ಅಧ್ಯಾತ್ಮಿಕ ಆಚರಣೆಗಳಿಗೆ ಶಕ್ತಿ ತುಂಬುತ್ತದೆ - ಕೆ. ಎಂ. ಮುಸ್ತಫ...

ಸುಳ್ಯ: ಪವಿತ್ರ ರಂಜಾನ್ ತಿಂಗಳು ಪೂರ್ತಿ ಉಪವಾಸ ವೃತದಿಂದ ಆತ್ಮ ಶುದ್ದೀಕರಣಗೊಳ್ಳುತ್ತದೆ, ದಾನ ಧರ್ಮಗಳಿಂದ ಇಂತಹ ಆದ್ಯಾತ್ಮಿಕ ಚಟುವಟಿಕೆ ಗಳಿಗೆ ಶಕ್ತಿ ತುಂಬುತ್ತದೆ ಎಂದು ದ. ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಮೀಫ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಹೇಳಿದರು.
ದ. ಕ ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಮೂಲಕ ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಜಾನ್ ಪ್ರಯುಕ್ತ 100 ಅರ್ಹ ಫಲಾನುಭವಿ ಕುಟುಂಬಗಳಿಗೆ ನೀಡುವ ನಿತ್ಯ ಉಪಯೋಗದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಸುಳ್ಯ ಘಟಕದ ಅಧ್ಯಕ್ಷ ಅಬೂಬಕ್ಕರ್ ಪಾರೆಕಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿ ಮೂಸ ಕುoಞ ಪೈoಬಚ್ಚಾಲ್, ಜೆಎಫ್ ಪೂರ್ವಾಧ್ಯಕ್ಷರುಗಳಾದ ಹಾಜಿ ಮೊಯಿದಿನ್ ಫ್ಯಾನ್ಸಿ, ಹಸೈನಾರ್ ಹಾಜಿ ಗೊರಡ್ಕ,ನಿರ್ದೇಶಕರುಗಳಾದ ಮಜೀದ್ ಮೆಡಿಕಲ್, ಅಮೀರ್ ಕುಕ್ಕುಂಬಳ,ಅಬ್ದುಲ್ ಖಾದರ್ ಸಂಗಮ್,ಇಬ್ರಾಹಿಂ ನೀರಬಿದಿರೆ, ಹಂಝ ಅಜ್ಮಿರಿಯ, ಝುಬೈರ್ ಆರಂತೋಡು ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಎಸ್. ಪಿ. ಅಬೂಬಕ್ಕರ್,ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಸಮಾಜ ಸೇವಾಸಕ್ತ ಸಿದ್ದೀಕ್ ಕಟ್ಟೆಕ್ಕಾರ್ಸ್ ಮೊದಲಾದವರು ಹಾಜರಿದ್ದರು.

whatsapp image 2025 03 05 at 1.52.55 pm (1)

Sponsors

Related Articles

Back to top button