ಆಮಂತ್ರಣ ಪತ್ರ ಬಿಡುಗಡೆ…

ಬಂಟ್ವಾಳ: ಶ್ರೀ ನಡಿಯೇಳು ದೈವoಗಳು ಶ್ರೀ ಉಳ್ಳಾಲ್ಡಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲು ಇದರ ನೂತನವಾಗಿ ನಿರ್ಮಾಣಗೊಂಡ ಮೂರು ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಧಿ ಕಾರ್ಯಕ್ರಮ ಏ. 2 ಮತ್ತು 3 ರಂದು ಬ್ರಹ್ಮಶ್ರೀ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಇದರ ಆಮಂತ್ರಣ ಪತ್ರವನ್ನು ಮಾ.2 ರಂದುಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆ ಗೊಳಿಸಿದರು.
ಕ್ಷೇತ್ರದ ನವನಿರ್ಮಾಣ ರೂವಾರಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಎಸ್ ಶ್ರೀಕಾಂತ್ ಶೆಟ್ಟಿ ಸಂಕೇಶ, ದೇವಿ ಪ್ರಸಾದ್ ಪೂoಜ, ಶಿವಪ್ರಸಾದ್ ಶೆಟ್ಟಿ, ಜೀವನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.