ಕರ್ನಾಟಕ ಪ್ರಾಂತ ಪ್ರಚಾರಕರಾದ ದಿವಂಗತ ಅಜಿತ್ ಕುಮಾರ್ ಜೈನ್ ಅವರ ಸ್ಮರಣೆ…
ಬಂಟ್ವಾಳ: ಶ್ರೀಕೃಷ್ಣ ಶಿಶುಮಂದಿರ ಕಂದೂರು ಸಜಿಪ ಮೂಡ ಇಲ್ಲಿ ಸೇವಾ ದಿನದ ಅಂಗವಾಗಿ ಕರ್ನಾಟಕ ಪ್ರಾಂತ ಪ್ರಚಾರಕರಾದ ದಿವಂಗತ ಅಜಿತ್ ಕುಮಾರ್ ಜೈನ್ ಅವರ ಸ್ಮರಣೆಯನ್ನು ಜ್ಯೋತಿ ಬೆಳಗಿ, ಪುಷ್ಪ ಸಲ್ಲಿಸುವ ಮೂಲಕ ಎಂ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.
1980 ರಲ್ಲಿ ಹಿಂದೂ ಸೇವಾ ಪ್ರತಿಷ್ಠಾನವನ್ನು ಆರಂಭಿಸಿ ಕರ್ನಾಟಕದಾದ್ಯಂತ ಜನತಾ ಸೇವೆ ಜನಾರ್ದನ ಸೇವೆ ಎಂಬ ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಅವರ ಒಡನಾಡಿಯಾಗಿದ್ದ ಲಕ್ಷ್ಮೀನಾರಾಯಣ ಭಟ್ ಪದ್ಯಾಣ ಅವರ ಶಿಸ್ತುಬದ್ಧ ಜೀವನದ ಬಗ್ಗೆ ಜೀವನ ಶೈಲಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಅಪಘಾತದಲ್ಲಿ ನಿಧನರಾದ ವೆಂಕಟರಮಣ ಹೊಳ್ಳ ಅಗ್ರಬೈಲ್ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಾತಾಜಿ ಕವಿತಾ ಸ್ವಾಗತಿಸಿ ನಿರೂಪಿಸಿದರು.