ಕರ್ನಾಟಕ ಕಲ್ಚರಲ್ ಫೌಂಡೇಶನ್ – 2021 ಕ್ಯಾಲೆಂಡರ್ ಬಿಡುಗಡೆ…

ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ವತಿಯಿಂದ ಹೊರ ತಂದ 2021ರ ಕ್ಯಾಲೆಂಡರನ್ನು ಸಮಾಯಿಲ್ ಮಾಝಿನ್ ಬಿನ್ ಗಲೂಬ(ರ.ಅ) ಸನ್ನಿಧಿಯಲ್ಲಿ ಅವರ ಝಿಯಾರತಿನೊಂದಿಗೆ ಕೆ ಸಿ ಎಫ್ ಒಮಾನ್ ಪಬ್ಲಿಶಿಂಗ್ ವಿಭಾಗ ಕಾರ್ಯದರ್ಶಿ ಶಫೀಕ್ ಮಾರ್ನಬೈಲು ರವರು ಕೆಸಿಎಫ್ ಒಮಾನ್ ರಾಷ್ಟ್ರೀಯಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿರವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಲಾಯಿತು.
ಝಿಯಾರತಿಗೆ ನೇತೃತ್ವವನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಬಹು ಸೆಯ್ಯಿದ್ ಆಬಿದ್ ಅಲ್ ಹೈದರೂಸಿ ತಂಙಳ್ ರವರು ವಹಿಸಿದ್ದರು. ಸಮಾರಂಭದಲ್ಲಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಮತ್ತು ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು ಮತ್ತು ಝೋನ್ ಪದಾಧಿಕಾರಿಗಳು ಹಾಜರಿದ್ದರು.
ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಎಲ್ಲಾ ಸದಸ್ಯರಿಗೂ ಮತ್ತು ಕೆ ಸಿ ಎಫ್ ನ ಹಿತೈಷಿಗಳಿಗೂ ಪ್ರತಿಯೊಂದು ಒಮಾನಿನಲ್ಲಿರುವ ಅನಿವಾಸಿ ಕನ್ನಡಿಗರಿಗೆ ಕ್ಯಾಲೆಂಡರ್ ತಲಪಿಸಲು ಶ್ರಮಿಸಬೇಕೆಂದು ನಾಯಕರಲ್ಲಿ ವಿನಂತಿಸಿದರು. ಕ್ಯಾಲೆಂಡರ್ ಹೊರ ತರಲು ಶ್ರಮಿಸಿದ ಪಬ್ಲಿಕೇಷನ್ ಸಮಿತಿ ಮತ್ತು ಕೆ ಸಿ ಎಫ್ ಒಮಾನ್ ಮೀಡಿಯಾ ಸಮಿತಿಯ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು. ಪ್ರಾಯೋಜಕರಾಗಿ ಸಹಕರಿಸಿದ ರೈಸ್ಕೋ ಗ್ರೂಪ್, ಅಲ್ ಕದೀರ್ ಟ್ರೇಡಿಂಗ್,ಗ್ರೇಟ್ ಇಂಡಿಯನ್ ಸಿರಾಮಿಕ್ ಹಾಗೂ ಅಲ್ ಅರಬ್ ಸೆರಾಮಿಕ್ ಇವರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು

76f57e00 Eb72 4fb5 B963 Fd8643268aa7 300x171

Related Articles

Leave a Reply

Your email address will not be published. Required fields are marked *