ಲೇಡಿಗೋಶನ್ ಆಸ್ಪತ್ರೆಯ ಹೌಸ್ ಸರ್ಜನ್ ಗಳಿಗೆ ಶಿಷ್ಯ ವೇತನ ನೀಡಲು ಆಗ್ರಹಿಸಿ ಪ್ರತಿಭಟನೆ…
ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಸಿಇಟಿ ವಿದ್ಯಾರ್ಥಿಗಳಿಗೆ ಸುಮಾರು 11 ತಿಂಗಳಿನಿಂದ ಶಿಷ್ಯ ವೇತನ ನೀಡದಿರುವುದನ್ನು ಖಂಡಿಸಿ ನಗರದ ವೆನ್ಲಾಕ್ ತೀವ್ರನಿಘಾ ಘಟಕದ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.
ದಿನದಲ್ಲಿ ಸುಮಾರು 18 ಗಂಟೆಗಳ ಕಾಲ ಸರಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ನಮ್ಮ ಆರೋಗ್ಯವನ್ನು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಯುವ ವೈದ್ಯರಿಗೆ ಕೊಡಬೇಕಾದ ವೇತನವನ್ನು ನೀಡದಿರುವುದು ಖಂಡನೀಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕಳೆದ 11 ತಿಂಗಳಿನಿಂದ ಶಿಷ್ಯ ವೇತನ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳ, ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸರಕಾರ ಶೀಘ್ರ ಶಿಷ್ಯ ವೇತನ ಬಿಡುಗಡೆಗೊಳಿಸದಿದ್ದರೆ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.