ಮಂಗಳವಾರ – ದ.ಕ 243 ,ಉಡುಪಿ 219 ಕೊರೊನ ಪಾಸಿಟಿವ್ ಪತ್ತೆ…
ಮಂಗಳೂರು: ಇಂದು(ಮಂಗಳವಾರ) ದ.ಕ ಜಿಲ್ಲೆಯಲ್ಲಿ 243 ,ಉಡುಪಿ ಜಿಲ್ಲೆಯಲ್ಲಿ 219 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 243 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7596 ಕ್ಕೆ ಏರಿಕೆಯಾಗಿದೆ.ಇಂದು 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. ಇಂದು 519 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2625 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 219 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6503ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2676 ಸಕ್ರಿಯ ಪ್ರಕರಣಗಳಿವೆ.ಇಂದು 4 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಾರ್ಕಳ ತಾಲೂಕಿನ 35 ವರ್ಷದ ಯುವಕ, ಬೈಂದೂರಿನ 48 ವರ್ಷದ ಪುರುಷ, ಉಡುಪಿ ತಾಲೂಕಿನ 66 ಮತ್ತು 41 ವರ್ಷ ಪ್ರಾಯದ ಪುರುಷರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 147 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 266 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 73 ಹಾಗೂ ಚೆಮ್ನಾಡ್ ನಲ್ಲಿ 37 ಮಂದಿಗೆ ಸೋಂಕು ಪತ್ತೆಯಾಗಿವೆ.