ಬ್ರಹ್ಮಗಿರಿ ದುರಂತ – ನಾರಾಯಣ ಆಚಾರ್ ಮೃತದೇಹ ಪತ್ತೆ…

ಮಡಿಕೇರಿ: ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ನಾರಾಯಣ ಆಚಾರ್ ಅವರ ಮೃತದೇಹ ಇಂದು ಪತ್ತೆಯಾಗಿದೆ.
ಗುರುವಾರ ಗುಡ್ಡ ಕುಸಿದು ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ನಾಲ್ವರು ನಾಪತ್ತೆಯಾಗಿದ್ದರು. ಶನಿವಾರ ಆನಂದತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು. ಇಂದು ನಾರಾಯಣ ಆಚಾರ್ ಅವರಿಗೆ ಸೇರಿದ ಎರಡು ಕಾರು, ಬೈಕ್, ನಾರಾಯಣ ಆಚಾರ್ ಅವರ ಮನೆ ನಾಯಿ ಮೃತದೇಹವೂ ಪತ್ತೆಯಾಗಿದೆ.
ಇನ್ನು ನಾರಾಯಣ ಆಚಾರ್ ಅವರ ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

IMG 20200811 WA0032 300x225 IMG 20200811 WA0031 300x225 IMG 20200811 WA0030 300x169 IMG 20200811 WA0029 300x169

Related Articles

Leave a Reply

Your email address will not be published. Required fields are marked *