ಎಸೆಸೆಲ್ಸಿ ಫಲಿತಾಂಶ – 622 ಅಂಕ ಗಳಿಸಿದ ಶೇಷಕೃಷ್ಣ …

ಸುರತ್ಕಲ್ : ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶೇಷಕೃಷ್ಣ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇವರು ಸುರತ್ಕಲ್ ನ ಎಸ್.ಆರ್. ಹರಿಕೃಷ್ಣ ಹಾಗೂ ವಿದ್ಯಾಲಕ್ಷ್ಮಿ ದಂಪತಿಯ ಪುತ್ರ.
ಪ್ರತಿದಿನದ ಕಠಿಣ ಅಭ್ಯಾಸ, ಹೆತ್ತವರ-ಶಿಕ್ಷಕರ-ಆಡಳಿತ ಮಂಡಳಿಯವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಶೇಷಕೃಷ್ಣ ಪ್ರತಿಕ್ರಿಯಿಸಿದ್ದಾರೆ.