ಅರಂತೋಡು -ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಸಮಾರೋಪ ಸಮಾರಂಭ…
ಸುಳ್ಯ :ಹಲವು ರೀತಿಯ ಉದ್ಯೋಗ ಪಡೆದು ಅಥವಾ ಸ್ವತಃ ಕೃಷಿ ಮಾಡಿಕೊಂಡು ತನ್ನ ಕಾಲಮೇಲೆ ನಿಂತು ಅತ್ಮ ಸ್ಥೆರ್ಯದಿಂದ ಬದುಕುದರಿಂದ ನಮ್ಮ ಜೀವನ ಸಕಾರಗೊಳ್ಳುವುದಕ್ಕೆ ಉದ್ಯೋಗ ನೈಪುಣ್ಯ ಕಾರ್ಯ ಸಾಕ್ಷಿಯಾಗಿದೆ. ನಾವು ಯಾವ ರೀತಿ ಕೆಲಸ ಮಾಡಬೇಕು.ನಾವು ಯಾವ ರೀತಿ ಬದುಕು ಕಟ್ಟಿಕೋಳ್ಳಬೇಕು ಎಂಬುದಕ್ಕೆ ಈ ಕಾರ್ಯ ದಾರಿದೀಪವಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು.
ಅವರು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ ಹಾಗೂ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ಸಹಯೋಗದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ದಕ್ಷಿಣ ಪ್ರಾಂತ ಗೋ ಸೇವಾ ಪ್ರಮುಖ್ ಪ್ರವೀಣ್ ಸರಳಾಯ,ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ,ತಾಲ್ಲೂಕು ಉಪಾಧ್ಯಕ್ಷೆ ಪುಷ್ಪ ಮೇದಪ್ಪ,ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಚಂದ್ರಶೇಖರ ತಳೂರು,ಪುತ್ತೂರು ವಿವೇಕಾನಂದ ವಿದ್ಯಾಲಯದ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ,ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಸಂಚಾಲಕ ಕೆ.ಆರ್.ಗಂಗಾಧರ್ ,ಗ್ರಾಮ ವಿಕಾಸ ಸಮಿತಿ ಮಂಗಳೂರು ಸಂಯೋಜಕ ವಿನೋದ್ ಬೋಳ್ಮಲೆ, ಸುಳ್ಯ ತಾಲ್ಲೂಕು ಸಹಕಾರಿ ಭಾರತಿ ಅಧ್ಯಕ್ಷ ಪ್ರವೀಣ್ ಸರಳಾಯ,ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ,ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ,ಮುಖ್ಯ ಶಿಕ್ಷಕ ಸೀತಾರಾಮ ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿ,ಉಮಾಶಂಕರ್ ವಂದಿಸಿ ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್.ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು .
ವರದಿ:ತಾಜುದ್ದೀನ್ ಅರಂತೋಡು